Thursday, 12th December 2024

ನಕಲಿ ಪ್ರೊಫೈಲ್‌ ಮಾಡಿದ್ರೆ 24 ಗಂಟೆಯಲ್ಲಿ ಅಕೌಂಟ್‌ ಬ್ಯಾನ್‌ !

ನವದೆಹಲಿ: ಪ್ರಸಿದ್ಧ ವ್ಯಕ್ತಿಗಳು, ಪ್ರಭಾವಿ ವ್ಯಕ್ತಿಗಳು ಮಾತ್ರವಲ್ಲದೇ ಜನಸಾಮಾನ್ಯರ ಫೋಟೋ ಬಳಸಿಕೊಂಡು ಅಕೌಂಟ್‌ ಕ್ರಿಯೇಟ್‌ ಮಾಡಿ ಅವರ ಫೋಟೋ ಹಾಕಿದರೆ ಅದು ಇನ್ನುಮುಂದೆ 24 ಗಂಟೆಯಲ್ಲಿಯೇ ಬ್ಯಾನ್‌ ಆಗಲಿದೆ. ಇದರರ್ಥ ಈ ರೀತಿ ಫೇಕ್‌ ಫೋಟೋ ಹಾಕಿದವರ ಬಗ್ಗೆ ಗಮನಕ್ಕೆ ಬಂದರೆ, ಮೂಲ ವ್ಯಕ್ತಿ ದೂರು ಸಲ್ಲಿಸಿದಾಗ ಇದು ಅನ್ವಯ ಆಗಲಿದೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಇನ್‌ಸ್ಟಾಗ್ರಾಂ, ಟ್ವಿಟರ್‌, ಯುಟ್ಯೂಬ್‌ ಮುಂತಾದವುಗಳ ಪ್ರೊಫೈಲ್‌ ಫೋಟೋದಲ್ಲಿ ಯಾರದ್ದೋ ಫೋಟೋ ಹಾಕಿಕೊಂಡು ಅದು ಅವರದ್ದೇ ಅಕೌಂಟ್‌ ಎಂದು ಬಿಂಬಿಸಿ ದುರ್ಬಳಕೆ ಮಾಡಿ ಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೇ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದೆ.

ಹೊಸ ಐಟಿ ನಿಯಮಗಳ ಅಡಿಯಲ್ಲಿ ದೂರು ನೀಡಿದ 24 ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮ ಕಂಪನಿಗಳು ನಕಲಿ ಪ್ರೊಫೈಲ್‌ಗಳನ್ನು ಸ್ಥಗಿತಗೊಳಿಸಬೇಕೆಂದು ಕೇಂದ್ರ ಸರ್ಕಾರ ಟ್ವಿಟರ್‌, ಗೂಗಲ್‌, ಫೇಸ್ಬುಕ್‌ಗಳಿಗೆ ಸೂಚನೆ ನೀಡಿದೆ.