ನವದೆಹಲಿ: ದೆಹಲಿಯಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಬುಧವಾರ ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆ ರದ್ದಾಗಿದೆ.
ರಾಜಧಾನಿಯಲ್ಲಿ ಚಳಿಯೂ ಹೆಚ್ಚಾಗಿರುವುದರಿಂದಾಗಿ 32 ವರ್ಷದ ರೈತನೊಬ್ಬ ಕೊನೆಯುಸಿರೆಳೆದಿದ್ದಾನೆ. ಹರಿಯಾಣ ಮೂಲದ ಅಜಯ್ ಮೋರ್ ಮೃತ ದುರ್ದೈವಿ. ಕಳೆದ 10 ದಿನಗಳಿಂದ ಹೋರಾಟದಲ್ಲಿ ಭಾಗವಹಿಸಿದ್ದ. ಚಳಿ ಹೆಚ್ಚಿದ್ದರಿಂದ ಅದನ್ನು ತಾಳಲಾರದೆ ಮಂಗಳವಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಅಜಯ್ಗೆ ವಯಸ್ಸಾದ ತಂದೆ ತಾಯಿಯಿದ್ದಾರೆ. ಮೂರು ಮಕ್ಕಳಿರುವುದಾಗಿ ವರದಿ ಮಾಡಿದೆ. ರೈತ ಹೋರಾಟ ಆರಂಭವಾದ 14 ದಿನಗಳಲ್ಲಿ ಐವರು ರೈತರು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.