ಹೊಸದಿಲ್ಲಿ: ವಾಹನದ ಮುಂದಿನ ಗಾಜಿಗೆ ಉದ್ದೇಶಪೂರ್ವಕವಾಗಿ ಫಾಸ್ಟಾಗ್ ಅಂಟಿಸದೇ ಇರುವ ವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHIA), ದುಪ್ಪಟ್ಟು ಟೋಲ್ ವಿಧಿಸಲು ಮುಂದಾಗಿದೆ.
ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿರುವ ಎನ್‌ಎಚ್‌ಐಎ, ಫಾಸ್ಟಾಗ್ ಅಂಟಿಸದಿರುವುದರಿಂದ ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾ ಗುತ್ತಿದೆ. ಇದನ್ನು ತಡೆಯಲು ದುಪ್ಪಟ್ಟು ಶುಲ್ಕ ವಿಧಿಸಬೇಕು ಎಂದು ಸೂಚಿಸಿದೆ.
ಫಾಸ್ಟಾಗ್ ನಿಯಮಗಳನ್ನು ಪಾಲಿಸ ದಿದ್ದರೆ ವಿಧಿಸಲಾಗುವ ದಂಡಗಳ ಕುರಿತು ಟೋಲ್ ಪ್ಲಾಜಾಗಳಲ್ಲಿ ಎಲ್ಲರಿಗೂ ಕಾಣಿಸುವಂತೆ ಮಾಹಿತಿ ಪ್ರದರ್ಶಿಸ ಬೇಕು. ಫಾಸ್ಟಾಗ್ ಇಲ್ಲದ ವಾಹನಗಳ ನೋಂದಣಿ ನಂಬರ್(ವಿಆರ್‌ಎನ್) ಸಿಸಿಟಿವಿಯಲ್ಲಿ ದಾಖ ಲಾಗಿರಬೇಕು. ಇದರಿಂದ ಶುಲ್ಕಕ್ಕೆ ಸಂಬಂಧಿಸಿದ ಸೂಕ್ತ ದಾಖಲೆ ನಿರ್ವಹಣೆ ಮತ್ತು ವಾಹನವು ಟೋಲ್ ಲೇನ್‌ನಲ್ಲಿತ್ತು ಎಂಬುದನ್ನು ತಿಳಿಯಬಹುದು.
ಫಾಸ್ಟಾಗ್ ಅಂಟಿಸದ ವಾಹನಗಳು ಉಚಿತ ಪ್ಲಾಜಾದಲ್ಲಿ ಹಾದು ಹೋಗಬೇಕಾಗುತ್ತದೆ ಮತ್ತು ದುಪ್ಪಟ್ಟು ಶುಲ್ಕ ಭರಿಸುವುದು ಮಾತ್ರವಲ್ಲದೇ, ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಎನ್‌ಎಚ್‌ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.