Thursday, 12th December 2024

ಏಪ್ರಿಲ್​ ವೇಳೆಗೆ ಫಾಸ್ಟ್ ಟ್ಯಾಗ್ ಸ್ಥಗಿತ..!

ವದೆಹಲಿ: ಕೇಂದ್ರ ಸರ್ಕಾರ ಶೀಘ್ರದಲ್ಲೇ ಇದಕ್ಕೆ ಫುಲ್​ಸ್ಟಾಪ್​ ಹಾಕಲು ತೀರ್ಮಾನಿಸಿದೆ. ಏಪ್ರಿಲ್​ ವೇಳೆಗೆ ಈ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಟೋಲ್ ಗೇಟ್‌ಗಳಲ್ಲಿ ವಾಹನ ಚಾಲಕರು ಕಾಯುವ ಸಮಯವನ್ನು ಕಡಿಮೆ ಮಾಡಿ, ತ್ವರಿತ ಪಾವತಿಗೆ ಅವಕಾಶ ಕಲ್ಪಿಸುವ ಫಾಸ್ಟ್ ಟ್ಯಾಗ್ ವ್ಯವಸ್ಥೆ ಯನ್ನು ಜಾರಿಗೆ ತರಲಾಗಿತ್ತು. ಫಾಸ್ಟ್ ಟ್ಯಾಗ್ ವ್ಯವಸ್ಥೆ ತೆಗೆದುಹಾಕುವುದರ ಹಿಂದಿನ ಪ್ರಮುಖ ಕಾರಣವೆಂದರೆ ಜಿಪಿಎಸ್​ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸುವುದಾಗಿದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಏಪ್ರಿಲ್ ವೇಳೆಗೆ ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಶೀಘ್ರದಲ್ಲೇ 2024ರ ಲೋಕಸಭೆ ಚುನಾವಣೆ ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಅದಕ್ಕೂ ಮುನ್ನ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಈ ಜಿಪಿಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೆ ತರಲು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರವು ಈಗಾಗಲೇ ಸಲಹೆಗಾರರನ್ನು ಸಹ ನೇಮಿಸಿದೆ ಎಂದು ವರದಿಯಾಗಿದೆ.

ಫಾಸ್ಟ್ಯಾಗ್ 2021 ರಲ್ಲಿ ಜಾರಿಗೆ ಬಂದಿತ್ತು. ಅಂದಿನಿಂದ ಪ್ರತಿ ವಾಹನವೂ ಫಾಸ್ಟ್ಯಾಗ್ ಹೊಂದಿರಬೇಕು ಎಂದು ಕೇಂದ್ರವು ಕಡ್ಡಾಯಗೊಳಿಸಿತ್ತು. ಪ್ರಸ್ತುತ, ಬಹುತೇಕ ಎಲ್ಲಾ ವಾಹನಗಳಿಂದ ಫಾಸ್ಟ್ ಟ್ಯಾಗ್ ಆಧಾರಿತ ಟೋಲ್ ಸಂಗ್ರಹಿಸಲಾಗುತ್ತಿದೆ. ಏಪ್ರಿಲ್ ನಂತರ ಟೋಲ್​ಗಳಲ್ಲಿ ಹಂತ ಹಂತವಾಗಿ ಫಾಸ್ಟ್ ಟ್ಯಾಗ್ ಕಣ್ಮರೆಯಾಗಲಿದೆ.

ಜಿಪಿಎಸ್ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿದ ನಂತರ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ವ್ಯವಸ್ಥೆಯ ಮೂಲಕ ಟೋಲ್ ಕಡಿತಗೊಳಿಸಲಾಗುತ್ತದೆ.