Sunday, 15th December 2024

ತಂದೆಯ ಅಂತ್ಯಸಂಸ್ಕಾರ: ಮದ್ಯ, ಬೀಡಿ, ಬನಾರಸಿ ಪಾನ್‌ ಬಳಸಿ ದಹನ

ಕ್ನೋ: ಉತ್ತರಪ್ರದೇಶದ ಮಣಿಕರ್ಣಿಕಾ ಘಾಟ್ನಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ಮದ್ಯ, ಬೀಡಿ ಹಾಗೂ ಬನಾರಸಿ ಪಾನ್‌ ನಿಂದ ದಹನ ಮಾಡಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ವ್ಯಕ್ತಿಯೊಬ್ಬ ತನ್ನ ಮೃತ ತಂದೆಯನ್ನು ಮದ್ಯ, ಬೀಡಿ ಮತ್ತು ಬನಾರಸಿ ಪಾನ್ ನಿಂದ ದಹನ ಮಾಡಿದ ವಿಚಿತ್ರ ಘಟನೆ ನಡೆದಿದೆ. ಮಣಿಕರ್ಣಿಕಾ ಘಾಟ್‌ನಲ್ಲಿ ಮೃತ ತಂದೆಯ ಚಿತೆಯ ಮೇಲೆ ವ್ಯಕ್ತಿಯೊಬ್ಬ ಪದಾರ್ಥಗಳನ್ನು ಸುರಿಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.