Sunday, 13th October 2024

ತಪ್ಪು ವರದಿ ಪ್ರಕಟ: ಸ್ಥಳೀಯ ಪತ್ರಕರ್ತನ ಬಂಧನ

ಚಂಡೀಗಢ: ಉಗ್ರಗಾಮಿಯನ್ನು ಬಂಧಿಸಿದ ಸ್ಥಳದ ಹೆಸರನ್ನು ತಪ್ಪಾಗಿ ಪ್ರಕಟಿಸಿದ ಕಾರಣ, ಸುದ್ದಿ ಬರೆದ ಪತ್ರಕರ್ತನನ್ನು ಪಂಜಾಬ್ ನಲ್ಲಿ ಬಂಧಿಸಲಾಗಿದೆ.

ಈ ಘಟನೆಯಿಂದ ಪೊಲೀಸರ ವಿರುದ್ಧ ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಿರುವ ಕೂಗು ಎದ್ದಿದೆ.

ದೈನಿಕ್ ಭಾಸ್ಕರ್ ಎನ್ನುವ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ಸುನಿಲ್ ಬಂಧಿತ ವ್ಯಕ್ತಿ. ಅದೇ ಪತ್ರಿಕೆಯ ಸಂಪಾದಕ ಸಂದೀಪ್ ಶರ್ಮಾ ಅವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮರ್ಡೋನ್ ಸಾಹಿಬ್ ಗ್ರಾಮದಲ್ಲಿ ಓರ್ವ ಉಗ್ರ ಟಿಫಿನ್ ಬಾಂಬ್ ಸಂಚು ರೂಪಿಸಿದ್ದ. ಆದರೆ ಪತ್ರಿಕೆಯಲ್ಲಿ ಐಒಸಿ ಡಿಪೋ ಎಂಬಲ್ಲಿಂದ ಉಗ್ರನನ್ನು ಬಂಧಿಸ ಲಾಯಿತು ಎಂದು ಬರೆಯಲಾಗಿತ್ತು. ಮಾರನೇ ದಿನವೇ ತಪ್ಪನ್ನು ತಿದ್ದಿ ಉಗ್ರನನ್ನು ಬಂಧಿಸಿದ ಸರಿಯಾದ ಸ್ಥಳವನ್ನು ಪತ್ರಿಕೆ ಪ್ರಕಟಿಸಿತ್ತು.