Thursday, 19th September 2024

ತೆಲಂಗಾಣದ ಮಾನಸಾ ವಾರಣಾಸಿಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ

ಹರ್ಯಾಣ: ವಿ.ಎಲ್.ಸಿ.ಸಿ. ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2020 ಕಿರೀಟವನ್ನು ತೆಲಂಗಾಣದ ಇಂಜಿನಿಯರ್ ಮಾನಸಾ ವಾರಣಾಸಿ ಮುಡಿಗೇರಿಸಿಕೊಂಡಿದ್ದಾರೆ.

ಹರಿಯಾಣದ ಮಾಣಿಕಾ ಶಿಯೋಕಾಂಡ್ ಫೆಮಿನಾ ಮಿಸ್ ಗ್ರ್ಯಾಂಡ್ ಇಂಡಿಯಾ – 2020 ಮತ್ತು ಉತ್ತರ ಪ್ರದೇಶದ ಮಾನ್ಯಾ ಸಿಂಗ್ ವಿ.ಎಲ್.ಸಿ.ಸಿ. ಫೆಮಿನಾ ಮಿಸ್ ಇಂಡಿಯಾ 2020 ರನ್ನರ್ ಅಪ್ ಆಗಿದ್ದಾರೆ.

ಬಾಲಿವುಡ್‌ ನಟಿಯರಾದ ನೇಹಾ ಧೂಪಿಯಾ, ಚಿತ್ರಾಂಗದಾ ಸಿಂಗ್, ನಟ ಪುಲ್ಕಿತ್ ಸಾಮ್ರಾಟ್, ಡಿಸೈನರ್ ಗಳಾದ ಫಾಲ್ಗುಣಿ ಮತ್ತು ಶೇನ್ ಪಿಕಾಕ್ ತೀರ್ಪುಗಾರರ ಸಮಿತಿಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಮಿಸ್ ವರ್ಲ್ಡ್ ಏಷ್ಯಾ 2019 ಸುಮನ್ ರಾವ್ ನೇತೃತ್ವ ವಹಿಸಿ ದ್ದರು. ಫೆಬ್ರವರಿ 28 ರಂದು ಗ್ರಾಂಡ್ ಫಿನಾಲೆಯನ್ನು ಕಲರ್ಸ್ ಟಿವಿ ಚಾನಲ್ ನಲ್ಲಿ ಪ್ರಸಾರ ಮಾಡಲಾಗುವುದು.

Leave a Reply

Your email address will not be published. Required fields are marked *