Saturday, 14th December 2024

ಬ್ಯಾಂಕ್ ಖಾತೆಗಳಿಗೆ ಆಧಾರ್‌ ಸಂಖ್ಯೆ ಖಚಿತಪಡಿಸಿಕೊಳ್ಳಲು ಮಾ.31 ಗಡುವು

Nirmala Sitharaman

ನವದೆಹಲಿ: ಮುಂಬರುವ ವರ್ಷದ ಮಾರ್ಚ್‌ 31ರೊಳಗೆ ಎಲ್ಲ ಖಾತೆಗಳು ಆಯಾ ಗ್ರಾಹಕರ ಆಧಾರ್ ಸಂಖ್ಯೆಗಳೊಂದಿಗೆ ಜೋಡಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದಾರೆ.

ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದಿರುವುದರಿಂದಾಗಿಯೇ ಹಣಕಾಸು ವರ್ಗಾವಣೆಯಲ್ಲಿ ಕೆಲ ತೊಂದರೆ ಉಂಟಾಗುತ್ತಿವೆ. ಆಧಾರ್ ಜೊತೆ ಲಿಂಕ್ ಮಾಡದ ಅನೇಕ ಖಾತೆಗಳಿವೆ. ಹೀಗಾಗಿ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿದ್ಯಾ ಎಂಬುದನ್ನು ಖಾತರಿಸುವಂತೆ ಬ್ಯಾಂಕ್ ಗಳಿಗೆ ಸೂಚಿಸಿದ್ದಾರೆ.

ಭಾರತೀಯ ಬ್ಯಾಂಕ್ ಗಳ ಸಂಘದ 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘2021ರ ಮಾರ್ಚ್ 31ರ ವೇಳೆಗೆ, ಪ್ರತಿ ಯೊಂದು ಖಾತೆಯಲ್ಲೂ ಪ್ಯಾನ್ ಇರಬೇಕು, ಆಧಾರ್ ಇರಬೇಕು’ ಎಂದು ಸಂಘದ (ಐಬಿಎ) 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೀತಾರಾಮನ್ ಹೇಳಿದರು.

ಯುಪಿಐ ನಮ್ಮ ಎಲ್ಲಾ ಬ್ಯಾಂಕ್ ಗಳಲ್ಲಿ ಒಂದು ಸಾಮಾನ್ಯ ವ್ಯವಹಾರದ ಮಾದ್ಯಮವಾಗಿದೆ. ಬ್ಯಾಂಕುಗಳು ರುಪೇ ಕಾರ್ಡ್ ಗಳನ್ನು ಉತ್ತೇಜಿಸಬೇಕು. ಈ ನಿಟ್ಟಿನಲ್ಲಿ ಯಾರಿಗೆ ರುಪೇ ಕಾರ್ಡ್ ಬೇಕೆ ಪಡೆದುಕೊಳ್ಳುವಂತೆ ಪ್ರಚಾರ ಪಡಿಸುವಂತೆಯೂ, ರುಪೇ ಕಾರ್ಡ್ ಬಳಕೆ ಬಗ್ಗೆ ಪ್ರಚಾರ ಮಾಡುವಂತೆಯೂ ತಿಳಿಸಿದರು.