Sunday, 15th December 2024

ಅಕ್ರಮ ಆಸ್ತಿ ಗಳಿಕೆ: ಡಿಕೆಶಿಗೆ ’ಎಫ್‌ಐಆರ್‌’ ಶಾಕ್

ನವದೆಹಲಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌’ಗೆ ಸಿಬಿಐ ಅಧಿಕಾರಿ ಗಳು ಮತ್ತೊಂದು ಬಿಗ್ ಶಾಕ್ ನೀಡಿದ್ದು, ಅಕ್ರಮ ಆಸ್ತಿ ಗಳಿಕೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ. ಈ ಮೂಲಕ ಡಿ.ಕೆ. ಶಿವ  ಕುಮಾರ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಸೋಮವಾರ ಡಿ.ಕೆ.ಶಿವ ಕುಮಾರ್ ನಿವಾಸ, ಕಚೇರಿ ಸೇರಿ 14 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿ ಶೀಲನೆ ನಡೆಸುತ್ತಿದೆ.