Saturday, 14th December 2024

ಜಾವೇದ್ ಅಖ್ತರ್ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈ  ಪೊಲೀಸರು ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ.

ನಗರ ಮೂಲದ ವಕೀಲ ಸಂತೋಷ್ ದುಬೆ ನೀಡಿದ ದೂರಿನ ಮೇಲೆ ಮುಲುಂದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಳೆದ ತಿಂಗಳು ಆರ್‌ಎಸ್‌ಎಸ್ ವಿರುದ್ಧ ‘ಸುಳ್ಳು ಮತ್ತು ಮಾನಹಾನಿಕರ’ ಟೀಕೆಗಳನ್ನು ಮಾಡಿದ್ದಕ್ಕಾಗಿ ವಕೀಲರು ಅಖ್ತರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದರು ಮತ್ತು ಅದಕ್ಕಾಗಿ ಕ್ಷಮೆ ಕೇಳುವಂತೆ ನೋಟಿಸ್ ನಲ್ಲಿ ಇತ್ತು.

ತಾಲಿಬಾನ್ ಮತ್ತು ಹಿಂದೂ ಉಗ್ರರ ನಡುವೆ ಸಾಮ್ಯತೆ ಇದೆ ಎಂದು ಹೇಳಿದ್ದರು. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅಖ್ತರ್ ಐಪಿಸಿ ಸೆಕ್ಷನ್ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಅಡಿಯಲ್ಲಿ ಅಪರಾಧ ಮಾಡಿದ್ದಾರೆ ಎಂದು ದುಬೆ ತನ್ನ ನೋಟಿಸ್‌ನಲ್ಲಿ ಹೇಳಿಕೊಂಡಿದ್ದರು.

ನಾನು ಈ ಹಿಂದೆ ಅಖ್ತರ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದೆ ಮತ್ತು ಅವರ ಹೇಳಿಕೆಗೆ ಕ್ಷಮೆ ಕೇಳುವಂತೆ ಕೇಳಿದ್ದೆ, ಆದರೆ ಅವರು ಅದನ್ನು ಮಾಡಲು ವಿಫಲರಾದರು ಎಂದು ವಕೀಲರು ತಿಳಿಸಿದರು.