ಹೈದರಾಬಾದ್: ರೆಸ್ಟೋರೆಂಟ್‌ನಲ್ಲಿ ಭಾರಿ ಅಗ್ನಿ ದುರಂತ(Fire Accident) ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲೇ ಇದ್ದ ಅಕ್ರಮ ಪಟಾಕಿ ಅಂಗಡಿಗೆ(Illegal Cracker Shop) ವ್ಯಾಪಿಸಿ ಅನೇಕರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಇನ್ನು ಬೆಂಕಿಯ ಜ್ವಾಲೆಗೆ ಅನೇಕ ವಾಹನಗಳು ಸುಟ್ಟು ಕರಕಲಾಗಿವೆ. ಭಾನುವಾರ ತಡರಾತ್ರಿ ಹೈದರಾಬಾದ್‌ನ ಸುಲ್ತಾನ್ ಬಜಾರ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸುಲ್ತಾನ್ ಬಜಾರ್‌ನ ಹೆಚ್ಚುವರಿ ಪೊಲೀಸ್ ಕಮಿಷನರ್ (ಎಸಿಪಿ), ಕೆ ಶಂಕರ್, ಈ ಘಟನೆಯು ರೆಸ್ಟೋರೆಂಟ್‌ನಲ್ಲಿ ಸಂಭವಿಸಿದೆ ಮತ್ತು ಹತ್ತಿರದ ಅಕ್ರಮ ಪಟಾಕಿ ಅಂಗಡಿಗೆ ಹಬ್ಬಿತ್ತು. ಅದೃಷ್ಟವಶಾತ್ ಯಾವುದೇ ಸಾವು ನೋವಿ ಸಂಭವಿಸಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
హైదరాబాద్:
— Telangana Awaaz (@telanganaawaaz) October 28, 2024
అబిడ్స్ లో గత రాత్రి.. బాణాసంచా దుకాణంలో అగ్నిప్రమాద దృశ్యాలు..#Hyderabad #fireworks #Fire pic.twitter.com/U2zqYcOG3s
ಬೆಂಕಿ ಅವಘಡದ ಬಗ್ಗೆ ವಿವರಗಳನ್ನು ಹಂಚಿಕೊಂಡ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎ ವೆಂಕಣ್ಣ, ರಾತ್ರಿ 9.18 ಕ್ಕೆ ನಮಗೆ ಕರೆ ಬಂದಿತು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಬಂದವು. ನಂತರ ಹೆಚ್ಚಿನ ಅಗ್ನಿಶಾಮಕ ಅಧಿಕಾರಿಗಳನ್ನು ಕರೆಸಿಕೊಂಡು ಬೆಂಕಿ ನಂದಿಸುವ ಕಾರ್ಯ ನಡೆಸಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಇಡೀ ರೆಸ್ಟೋರೆಂಟ್ ಸುಟ್ಟು ಬೂದಿಯಾಗಿದೆ. ಇನ್ನು ರೆಸ್ಟೋರೆಂಟ್ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.
ರಾತ್ರಿ 10.30-10.45 ರ ಸುಮಾರಿಗೆ ಬೆಂಕಿಯನ್ನು ನಂದಿಸಲಾಯಿತು. ಇದು ರೆಸ್ಟೋರೆಂಟ್ ಸಂಪೂರ್ಣವಾಗಿ ಸುಟ್ಟುಹೋಗಿದೆ. 7-8 ಕಾರುಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಒಬ್ಬ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ” ಎಂದು ಎಸಿಪಿ ಶಂಕರ್ ಎಎನ್‌ಐಗೆ ತಿಳಿಸಿದ್ದಾರೆ.
हैदराबाद शहर के एबिड्स इलाके में एक पटाखों की दुकान में अचानक भीषण आग लग गई, जिससे आसपास के क्षेत्र में अफरातफरी मच गई।
— Amit Pandey (@amitpandaynews) October 28, 2024
रिपोर्ट के मुताबिक आग को बुझाने के लिए घटना स्थल पर दमकल विभाग गाड़ियां पहुंच गई हैं… देखिए वीडियो #Fire #Hyderabad #Crackers #CrackersShops #News pic.twitter.com/ysnNuAbdNi
ಅಕ್ರಮ ಅಂಗಡಿಗಳ ವಿರುದ್ಧ ಕ್ರಮ
ಇನ್ನು ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡ ಬೆಂಕಿಯು ಪಕ್ಕದ ಪಟಾಕಿ ಅಂಗಡಿಗೆ ಹರಡಿತು. ಅಂಗಡಿಗೆ ಯಾವುದೇ ಅಧಿಕೃತ ಪ್ರಮಾಣ ಪತ್ರವಿಲ್ಲ. ಇದು ಅಕ್ರಮ ಅಂಗಡಿಯಾಗಿದೆ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರೆಸ್ಟೊರೆಂಟ್ ಸಂಪೂರ್ಣ ಹಾನಿಗೊಳಗಾಗಿದ್ದು, ಇದು ಜನ ವಸತಿ ಪ್ರದೇಶವಿದ್ದರೆ ಭಾರೀ ಹಾನಿಯಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಈ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬುದು ತಿಳಿದುಬಂದಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Sivakasi : ಶಿವಕಾಶಿ, ಭಾರತದ ಪಟಾಕಿ ರಾಜಧಾನಿ ಈ ಬಿಸಿನೆಸ್ ಎಷ್ಟು ಸಾವಿರ ಕೋಟಿ ಗೊತ್ತೇ?