Sunday, 15th December 2024

ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ಐವರ ಸಾವು

ರಾಜ್ ಕೋಟ್: ಗುಜರಾತ್ ರಾಜ್ಯದ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ.

ರಾಜ್ ಕೋಟ್ ನಗರದ ಉದಯ ಶಿವಾನಂದ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಕಿಟಕಿ ಮೂಲಕ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೋಂಕಿತರನ್ನು ರಕ್ಷಿಸಿದ್ದಾರೆ.

ಬೆಂಕಿ ಏಕಾಏಕಿ ವ್ಯಾಪಿಸಿದ್ದು, ದಟ್ಟ ಹೊಗೆ, ಬೆಂಕಿಯ ಕೆನ್ನಾಲಗೆಯಿಂದ ಸೋಂಕಿತರು ಹೊರ ಬರಲು ಸಾಧ್ಯವಾಗಿಲ್ಲ.