Thursday, 12th December 2024

ಮಾಸ್ಕ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ: ಓರ್ವ ಸಾವು, ಮೂವರಿಗೆ ಗಾಯ

ನವದೆಹಲಿ : ಮಾಯಾಪುರಿ ಪ್ರದೇಶದಲ್ಲಿ ಮಾಸ್ಕ್ ತಯಾರಿಕಾ ಘಟಕದಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ಗಾಯಗೊಂಡಿರುವ ಇತರ ಮೂವರನ್ನು ರಕ್ಷಿಸಲಾಗಿದೆ.

ಆರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ್ ತಿಳಿಸಿದ್ದಾರೆ. ಮೃತವ್ಯಕ್ತಿಯನ್ನು ಜುಗಲ್ ಕಿಶೋರ್ ಎಂದು ಗುರುತಿಸಲಾಗಿದೆ ಎಂದು ಗಾರ್ಗ್ ತಿಳಿಸಿದ್ದಾರೆ.

ಉತ್ಪಾದನಾ ಘಟಕದ ಮೂರನೇ ಮಹಡಿಯಲ್ಲಿರುವ ಯಂತ್ರಗಳು ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾದ ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ಡಿಎಫ್ ಎಸ್ ಮುಖ್ಯಸ್ಥರು ತಿಳಿಸಿದ್ದಾರೆ. ಡಿಎಫ್ ಎಸ್ ತಂಡ ಘಟಕದ ಬಾಗಿಲುಗಳು ಮತ್ತು ಗೋಡೆಗಳನ್ನು ಮುರಿದ ನಂತರ ಮೂವರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ರಕ್ಷಿಸಲ್ಪಟ್ಟವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಲಾಗಿದೆ.