Friday, 20th September 2024

ಕೇರಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ

Omicron at Kerela

ನವದೆಹಲಿ ಒಮಿಕ್ರಾನ್ ರೂಪಾಂತರದ ತನ್ನ ಮೊದಲ ಕೋವಿಡ್ ಪ್ರಕರಣ ಕೇರಳ ದಲ್ಲಿ ವರದಿಯಾಗಿದ್ದು ಒಟ್ಟು ಒಮಿಕ್ರಾನ್ ಪ್ರಕರಣದ ಸಂಖ್ಯೆ 38ಕ್ಕೇರಿದೆ.

ಭಾನುವಾರ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಚಂಡೀಗಢದಲ್ಲಿ ಈ ಹೊಸ ರೂಪಾಂತರದ ಹೊಸ ಪ್ರಕರಣಗಳು ವರದಿಯಾಗಿವೆ. ಕೇರಳದ ಒಮಿಕ್ರಾನ್ ರೋಗಿ ಡಿ.8 ರಂದು ಪಾಸಿಟಿವ್ ಪರೀಕ್ಷೆ ನಡೆಸಿದ್ದರು. ಅವರು ಯುಕೆಯಿಂದ ರಾಜ್ಯಕ್ಕೆ ಮರಳಿದ್ದರು.

ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ. ಅವರ ಪತ್ನಿ ಮತ್ತು ಅತ್ತೆ ಕೊವಿಡ್ ಪಾಸಿಟಿವ್ ಆಗಿದ್ದು ಅವರನ್ನು ಪ್ರತ್ಯೇಕಿಸಿ ನಿಗಾ ಇರಿಸಲಾಗಿದೆ.

ಹೊಸ ರೂಪಾಂತರವನ್ನು ಮೊದಲು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲಾಯಿತು. ಭಾರತದ ಮೊದಲ ಒಮಿಕ್ರಾನ್ ಪ್ರಕರಣಗಳು ಡಿಸೆಂಬರ್ 2 ರಂದು ಕರ್ನಾಟಕದಲ್ಲಿ ದೃಢಪಟ್ಟಿತ್ತು