Thursday, 12th December 2024

ಮುಂಬೈ ಬ್ರೇಕಿಂಗ್‌: ಎರಡು ಲಸಿಕೆ ಪಡೆದರೂ ಮಹಿಳೆ ಸಾವು

ಮುಂಬೈ: ಕರೋನಾ ವಿರುದ್ಧ ಎರಡೂ ಲಸಿಕೆ ಪಡೆದಿದ್ದರೂ ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮುಂಬೈನಲ್ಲಿ ಮಹಿಳೆ(63) ಮೃತಪಟ್ಟಿದ್ದಾರೆ. ಈ ಸೋಂಕಿ ನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.

ಮಹಿಳೆಗೆ ಕೋವಿಡ್ ವ್ಯಾಕ್ಸಿನೇಷನ್ ಮಾಡಲಾಗಿದ್ದು, ಎರಡೂ ಡೋಸ್‌ಗಳನ್ನು ಅವರು ಪಡೆದಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ, ಮಹಿಳೆಯಲ್ಲಿ ಜುಲೈ 21ರಂದು ಕೋವಿಡ್ ಸೋಂಕು ಇರುವುದು ಕಂಡುಬಂದಿತ್ತು. ಮಹಿಳೆಗೆ ಒಣ ಕೆಮ್ಮು, ರುಚಿ ಇಲ್ಲದಿರುವುದು, ಮೈಕೈ ನೋವು ಮತ್ತು ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದ್ದಿದ್ದವು. ಚಿಕಿತ್ಸೆ ನೀಡಿದರೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜುಲೈ 24ರಂದು ಐಸಿಯುಗೆ ದಾಖಲಿಸಲಾಗಿತ್ತು.

ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದ ಮಹಿಳೆ ಮೃತಪಟ್ಟಿದ್ದಾರೆ.