Sunday, 15th December 2024

ಕೋವಿಡ್‌ ಲಸಿಕೆಯ ಅಡ್ಡ ಪರಿಣಾಮದಿಂದ ಸಾವು: ಮೊದಲ ಪ್ರಕರಣ ದೃಢ

ನವದೆಹಲಿ: ಕೋವಿಡ್‌ ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸರ್ಕಾರ ನೇಮಿಸಿರುವ ಸಮಿತಿಯು, ಕೋವಿಡ್‌-19 ಲಸಿಕೆಯ ಅಡ್ಡ ಪರಿಣಾಮದಿಂದ ಮೃತಪಟ್ಟಿರುವ ಮೊದಲ ಪ್ರಕರಣ ದೃಢಪಡಿಸಿದೆ.

ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಂತರ ಅಲರ್ಜಿಯಿಂದ ಬಳಲುತ್ತಿದ್ದ 31 ಪ್ರಕರಣಗಳನ್ನು ‘ನ್ಯಾಷನಲ್ ಸೀರಿಯಸ್ ಅಡ್ವರ್ಸ್‌ ಈವೆಂಟ್ಸ್‌ ಫಾಲೋಯಿಂಗ್ ಇಮ್ಮುನೈಸೇಷನ್’ (ಎಇಎಫ್‌ಐ) ಸಮಿತಿ ಮೌಲ್ಯಮಾಪನ ಮಾಡಿ ವರದಿ ನೀಡಿದೆ.

68 ವರ್ಷದ ಹಿರಿಯರೊಬ್ಬರು ಕಳೆದ ಮಾರ್ಚ್‌ 8ರಂದು, ಲಸಿಕೆ ಹಾಕಿಸಿಕೊಂಡ ನಂತರ ತೀವ್ರ ಅಲರ್ಜಿಯಿಂದ ಮೃತಪಟ್ಟಿ ದ್ದಾರೆ. ಇದನ್ನು ಲಸಿಕೆಯ ಪಡೆದ ನಂತರ ತೀವ್ರ ಅಲರ್ಜಿಯಿಂದ ಉಂಟಾದ ಮೊದಲ ಸಾವು ಎಂದು ಸಮಿತಿ ದೃಢಪಡಿಸಿದೆ.

ಲಸಿಕೆ ಹಾಕಿಸಿಕೊಂಡವರು, ಲಸಿಕಾ ಕೇಂದ್ರದಲ್ಲಿ 30 ನಿಮಿಷಗಳ ಕಾಲ ಕಾಯಬೇಕು ಎಂಬುದನ್ನು ಈ ಪ್ರಕರಣ ಒತ್ತಿ ಹೇಳುತ್ತಿದೆ. ಈ ಅವಧಿಯಲ್ಲಿ ತೀವ್ರ ಅಲರ್ಜಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಅದಕ್ಕೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಿದರೆ ಸಾವು ಸಂಭವಿ ಸುವುದನ್ನು ತಪ್ಪಿಸಬಹುದು’ ಎಂದು ರಾಷ್ಟ್ರೀಯ ಎಇಎಫ್‌ಐ ಸಮಿತಿ ಅಧ್ಯಕ್ಷ ಅರೋರಾ ತಿಳಿಸಿದ್ದಾರೆ.