Sunday, 15th December 2024

ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ

ಅಸ್ಸಾಂ: ಒಂದೇ ಕುಟುಂಬದ ಐದು ಮಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸೋಂನ ಕೋಕ್ರಾ ಜಾರ್ ಜಿಲ್ಲೆಯ ತುಳ್ಸಿಬಿಲ್ ಬಜಾರ್ ನ ಗೊಸ್ಸೈಗಾಂವ್ ನಲ್ಲಿ ಘಟನೆ ನಡೆದಿದೆ.

ಐವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡವರಲ್ಲಿ ಮೂವರು ಮಹಿಳೆಯರು. ಮೃತರನ್ನು ನಿರ್ಮಲ್ ಪೌಲ್, ನಿಹಾ ಪೌಲ್, ದೀಪಾ ಪೌಲ್, ಮೊಲ್ಲಿಕಾ ಪೌಲ್ ಎಂದು ಗುರುತಿಸಲಾಗಿದೆ.

ಕುಟುಂಬದ ಸದಸ್ಯರು ಮನೆಯಿಂದ ಯಾರೂ ಹೊರಗೆ ಬರದ ಹಿನ್ನೆಲೆ ಸ್ಥಳೀಯರು ಮನೆಗೆ ಹೋಗಿ ಗಮನಿಸಿದಾಗ ಐವರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.