Wednesday, 11th December 2024

ರಾಜಸ್ಥಾನದಲ್ಲಿ ನಿರಂತರ ಮಳೆ: ಒಂದೇ ಕುಟುಂಬದ ಐವರ ಸಾವು

ಕೋಟಾ: ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಮನೆಯ ಮೇಲೆ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸದಸ್ಯರು ಮೃತಪಟ್ಟಿದ್ದಾರೆ.

ಮಂಗಳವಾರ ಮಧ್ಯರಾತ್ರಿ ನವಘಾಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಹೋದರರಾದ ಮಹೇಂದ್ರ ಕೈವತ್ ಮತ್ತು ಮಹಾವೀರ್ ಕೈವತ್ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ ಮನೆಯ ಮೇಲೆ ಹಳೆಯ ಗೋಡೆ ಕುಸಿದಿದೆ ಎಂದು ಬಂಡಿ ಎಸ್ಪಿ ತಿಳಿಸಿದ್ದಾರೆ.

ಕುಟುಂಬದ ಏಳು ಸದಸ್ಯರು ಅವಶೇಷಗಳಡಿ ಸಿಲುಕಿದ್ದು ಇಬ್ಬರನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಇತರ ಮೂವರನ್ನು ರಕ್ಷಿಸಲಾಗಿದೆ.