ದೀರ್ಘಾವಧಿಯವರೆಗೆ ಒಂದು ನಿರ್ದಿಷ್ಟ ಮೊತ್ತವನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವುದು ಕಷ್ಟ. ಯಾಕೆಂದರೆ ಕೈಲ್ಲಿದ್ದ ಹಣ ಯಾವಾಗ ನೀರಿನಂತೆ ಖರ್ಚಾಗಿ ಹೋಗುತ್ತದೆ ಎನ್ನುವುದು ಸಾಧ್ಯವಿಲ್ಲ. ಇದಕ್ಕಾಗಿಯೇ ಬ್ಯಾಂಕ್‌ಗಳು (bank) ಸ್ಥಿರ ಠೇವಣಿಯಲ್ಲಿ (Fixed Deposit) ಹೂಡಿಕೆ ಮಾಡಲು ಗ್ರಾಹಕರನ್ನು ಪ್ರೇರೇಪಿಸುತ್ತದೆ. ಇದು ನಿರ್ದಿಷ್ಟ ಅವಧಿಗೆ ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತವೆ.
ಹೂಡಿಕೆ ಬಗ್ಗೆ ಯೋಚಿಸುವಾಗ ಎಲ್ಲರೂ ಹೆಚ್ಚು ಸುರಕ್ಷಿತವಾದ ಹೂಡಿಕೆಯನ್ನು ಆಯ್ಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಬ್ಯಾಂಕ್‌ಗಳು ಯಾವಾಗಲೂ ಅತ್ಯಂತ ವಿಶ್ವಾಸಾರ್ಹವಾಗಿರುತ್ತದೆ.
ಹೆಚ್ಚಿನ ಭಾರತೀಯ ನಾಗರಿಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ದೀರ್ಘಾವಧಿಗೆ ಹೂಡಿಕೆಯನ್ನು ಮಾಡಲು ಇಚ್ಛಿಸುತ್ತಾರೆ. ಯಾಕೆಂದರೆ ಎಸ್‌ಬಿಐ ತಮ್ಮ ಗ್ರಾಹಕರಿಗೆ ಸ್ಥಿರ ಠೇವಣಿ (FD) ಮೇಲೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ಎಸ್‌ಬಿಐ ಸ್ಥಿರ ಠೇವಣಿ ಮೇಲೆ ಯಾರು ಬೇಕಾದರೂ ಖಾತೆಯನ್ನು ತೆರೆಯಬಹುದು.
ಎಸ್‌ಬಿಐ ಎಫ್‌ಡಿ ಹಣವನ್ನು ಸ್ಥಿರವಾದ ಬಡ್ಡಿ ದರದೊಂದಿಗೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾರುಕಟ್ಟೆಯ ಏರಿಳಿತಗಳು ಇದರ ಬಡ್ಡಿ ದರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಎಸ್‌ಬಿಐ ಎಫ್‌ಡಿ ಖಾತೆ ತೆರೆಯುವುದು ಹೇಗೆ?
ಅಂಚೆ ಕಚೇರಿ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳಲ್ಲಿ ಎಫ್‌ಡಿ ಸೌಲಭ್ಯವಿದೆ. ಹೆಚ್ಚು ಬಡ್ಡಿಯನ್ನು ಪಾವತಿಸುವ ಬ್ಯಾಂಕ್‌ಗಳಲ್ಲಿ ಎಫ್‌ಡಿಯಿಂದ ಹೆಚ್ಚು ಪ್ರಯೋಜನ ಪಡೆಯಬಹುದು.
ಎಸ್‌ಬಿಐ ಸ್ಥಿರ ಠೇವಣಿ ಖಾತೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ತೆರೆಯಬಹುದು. ಎಸ್‌ಬಿಐಯ ವೈಯಕ್ತಿಕ ಬ್ಯಾಂಕಿಂಗ್ ಪೋರ್ಟಲ್‌ಗೆ ಭೇಟಿ ನೀಡಿಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಸಹಾಯದಿಂದ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಿ. ‘ಠೇವಣಿ’ ಆಯ್ಕೆಯನ್ನು ಆರಿಸಿ. ಅನಂತರ ‘ಫಿಕ್ಸೆಡ್ ಡೆಪಾಸಿಟ್’ ಆಯ್ಕೆಯನ್ನು ಆಯ್ದುಕೊಳ್ಳಿ.
ಬಳಿಕ ‘ಇ-ಫಿಕ್ಸೆಡ್ ಡೆಪಾಸಿಟ್’ ಆಯ್ಕೆಯನ್ನು ಆರಿಸಿ. ಫಿಕ್ಸೆಡ್ ಡೆಪಾಸಿಟ್ ಪ್ರಕಾರವನ್ನು ಆಯ್ಕೆ ಮಾಡಿದ ಬಳಿಕ ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ಅನಂತರ ‘ಸಲ್ಲಿಸು’ ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಎಫ್‌ಡಿ ಖಾತೆ ತೆರೆಯುತ್ತದೆ. ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್‌ಗೆ ಹೋಗಿ ಕೂಡ ಎಫ್‌ಡಿ ಖಾತೆಯನ್ನು ತೆರೆಯಬಹುದು.
ಹೇಗಿದೆ ಯೋಜನೆ?
ಎಸ್‌ಬಿಐ 5ರಿಂದ 10 ವರ್ಷಗಳ ಅವಧಿಯ ಎಫ್‌ಡಿಗಳ ಮೇಲೆ ವಾರ್ಷಿಕ ಶೇ. 6.50 ದರದಲ್ಲಿ ಬಡ್ಡಿಯನ್ನು ನೀಡುತ್ತದೆ. ಅಂದರೆ ಈ ಅವಧಿಯ ನಡುವೆ ಯಾವುದೇ ಸಮಯದವರೆಗೆ ನಿಶ್ಚಿತ ಠೇವಣಿ ಮಾಡಿದರೆ ಶೇ. 6.50 ದರದಲ್ಲಿ ಬಡ್ಡಿ ದೊರೆಯುತ್ತದೆ.
ಶೇ. 6.50 ಬಡ್ಡಿ ದರದಲ್ಲಿ 7 ವರ್ಷಗಳವರೆಗೆ 7 ಲಕ್ಷ ರೂಪಾಯಿಗಳನ್ನು ಎಫ್ ಡಿ ಮಾಡಿದರೆ ಮುಕ್ತಾಯದ ವೇಳೆಗೆ 10,99,293 ರೂಪಾಯಿಗಳನ್ನು ಪಡೆಯಬಹುದು. 7 ವರ್ಷಗಳಲ್ಲಿ 7 ಲಕ್ಷ ಎಫ್‌ಡಿಯಲ್ಲಿ, 3,99,293 ರೂ. ಹೆಚ್ಚುವರಿ ಹಣ ದೊರೆಯುವುದು. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವು ಅವಧಿಗೆ ಅನುಗುಣವಾಗಿ ಬದಲಾಗುತ್ತದೆ.
Reliance Retail: ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಐಷಾರಾಮಿ ಬ್ಯೂಟಿ ಸ್ಟೋರ್ ಆರಂಭಿಸಿದ ಟಿರಾ!
ದೀರ್ಘಾವಧಿಯವರೆಗೆ ಎಫ್‌ಡಿಗಳ ಮೇಲಿನ ಬಡ್ಡಿ ದರಗಳು ಹೆಚ್ಚು. ಎಸ್‌ಬಿಐ ಎಫ್‌ಡಿ ಬಡ್ಡಿದರಗಳು ಸಾಮಾನ್ಯ ಜನರಿಗೆ ಶೇ. 3.50ರಿಂದ ಶೇ.7.25ರವರೆಗೆ ಇರುತ್ತದೆ. ಹಿರಿಯ ನಾಗರಿಕರಿಗೆ ಶೇ. 4ರಿಂದ ಶೇ. 7.75ರವರೆಗೆ ಬಡ್ಡಿ ನೀಡಲಾಗುತ್ತದೆ. ಇದರ ಅವಧಿಯು 7 ದಿನಗಳಿಂದ 10 ವರ್ಷಗಳವರೆಗೆ ಇರುತ್ತದೆ.