Wednesday, 20th November 2024

Fixed Deposits: ಸ್ಥಿರ ಠೇವಣಿ; ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ ಬಡ್ಡಿ?

Fixed Deposits

ದೊಡ್ಡ ಮೊತ್ತದ ಹಣ ಕೈಗೆ ಬಂದಾಗ ಎಲ್ಲಾದರೂ ಸ್ಥಿರವಾಗಿ ಠೇವಣಿ (Fixed Deposits) ಮಾಡಬೇಕು, ಅದಕ್ಕೆ ಉತ್ತಮ ಬಡ್ಡಿಯನ್ನು ಪಡೆಯಬೇಕು ಎನ್ನುವುದು ಎಲ್ಲರ ಬಯಕೆ. ಸ್ಥಿರ ಠೇವಣಿ ಮಾಡುವಾಗ ನಾವು ನಮ್ಮ ಖಾತೆ ಹೊಂದಿರುವ ಬ್ಯಾಂಕ್ (Bank) ಅಥವಾ ಹತ್ತಿರದ ಬ್ಯಾಂಕ್ ಬಗ್ಗೆ ಮಾತ್ರ ಯೋಚಿಸುತ್ತೇವೆ. ಅಲ್ಲಿ ಎಷ್ಟು ಬಡ್ಡಿ ದರವಿದೆ (interest rate) ಎಂದು ಪರಿಶೀಲಿಸಲು ಹೋಗುವುದಿಲ್ಲ.

ಸ್ಥಿರ ಠೇವಣಿ ಇಡುವ ಮುನ್ನ ಬ್ಯಾಂಕ್‌ಗಳು ನೀಡುವ ಬಡ್ಡಿ ದರದ ಬಗ್ಗೆ ಪರಿಶೀಲನೆ ನಡೆಸಿದರೆ ನಾವು ಹೂಡಿಕೆ ಮಾಡುವ ಹಣಕ್ಕೆ ಸೂಕ್ತ ಲಾಭವನ್ನು ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಸ್ಥಿರ ಠೇವಣಿಗಳಲ್ಲಿ ಜನರಲ್ಲಿ ವಿಶ್ವಾಸ ಹೆಚ್ಚಾಗುತ್ತಿದೆ. ಹಲವಾರು ಬ್ಯಾಂಕುಗಳು ನಿಯಮಿತವಾಗಿ ಹೊಸ ಎಫ್‌ಡಿ ಯೋಜನೆಗಳನ್ನು ಪರಿಚಯಿಸುತ್ತವೆ. ಈ ಯೋಜನೆಗಳು ಬಹಳ ಆಕರ್ಷಕವಾದ ಬಡ್ಡಿ ದರವನ್ನು ನೀಡುತ್ತವೆ. ಈ ಮೂಲಕ ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ಒದಗಿಸುತ್ತವೆ. ಸ್ಥಿರ ಠೇವಣಿಗೆ ಹೆಚ್ಚಿನ ಬಡ್ಡಿ ದರ ನೀಡುವ 6 ಪ್ರಮುಖ ಬ್ಯಾಂಕ್‌ಗಳು ಮಾಹಿತಿ ಇಲ್ಲಿದೆ.

Fixed Deposits

ಎಸ್‌ಬಿಐನಿಂದ ಹೊಸ ಯೋಜನೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಕಾರ್ಯಕ್ರಮದಲ್ಲಿ ಹೂಡಿಕೆದಾರರಿಗೆ ಆಕರ್ಷಕ ಬಡ್ಡಿ ದರಗಳನ್ನು ನೀಡಲಾಗುತ್ತಿದೆ. ಎಸ್‌ಬಿಐನ ಹೊಸ ಎಫ್‌ಡಿಗೆ ಅಮೃತ್ ವೃಷ್ಟಿ ಎಂದು ಹೆಸರಿಸಲಾಗಿದೆ. ಈ ಯೋಜನೆಯು 444 ದಿನಗಳವರೆಗೆ ಇರುತ್ತದೆ. ಇದರಲ್ಲಿ ಸಾಮಾನ್ಯ ಜನರಿಗೆ ಹೂಡಿಕೆಯ ಮೇಲೆ ಶೇ. 7.25ರವರೆಗೆ ವಾರ್ಷಿಕ ಬಡ್ಡಿ ದರವನ್ನು ನೀಡಲಾಗುತ್ತದೆ.

ಹಿರಿಯ ನಾಗರಿಕರಿಗೆ ಒಂದೇ ಅವಧಿಗೆ ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರು ವಾರ್ಷಿಕ ಶೇ. 7.75ರಷ್ಟು ಬಡ್ಡಿ ದರವನ್ನು ಪಡೆಯಬಹುದು. ಹೂಡಿಕೆದಾರರು ಈ ಯೋಜನೆಯಲ್ಲಿ 2025ರ ಮಾರ್ಚ್ 31ರವರೆಗೆ ಹೂಡಿಕೆ ಮಾಡಬಹುದು.

ಪಿಎನ್‌ಬಿ

ಸ್ಥಿರ ಠೇವಣಿ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 400 ದಿನಗಳ ಅವಧಿಯಲ್ಲಿ ಸಾಮಾನ್ಯ ನಾಗರಿಕರಿಗೆ ವರ್ಷಕ್ಕೆ ಶೇ. 7.30 ಮತ್ತು ಹಿರಿಯ ನಾಗರಿಕರಿಗೆ ಶೇ. 7.80ರಷ್ಟು ಬಡ್ಡಿ ದರವನ್ನು ಒದಗಿಸುತ್ತಿದೆ.

Fixed Deposits

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಸ್ಥಿರ ಠೇವಣಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ. 7.25 ಬಡ್ಡಿ ದರವನ್ನು ಮತ್ತು ಹಿರಿಯ ನಾಗರಿಕರಿಗೆ ಶೇ. 7.75 ಬಡ್ಡಿ ದರವನ್ನು 444 ದಿನಗಳ ಅವಧಿಗೆ ಒದಗಿಸುತ್ತಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 399 ದಿನಗಳ ಅವಧಿಗೆ ಹೂಡಿಕೆ ಮಾಡುವ ಸ್ಥಿರ ಠೇವಣಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ. 7.25 ಮತ್ತು ಹಿರಿಯ ನಾಗರಿಕರಿಗೆ ಶೇ. 7.75ರವರೆಗೆ ಬಡ್ಡಿದರವನ್ನು ಒದಗಿಸುತ್ತಿದೆ.

ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾ ಬಾಬ್ ಮಾನ್ಸೂನ್ ಧಮಾಕಾ ಎಂಬ 399 ದಿನಗಳ ಸ್ಥಿರ ಠೇವಣಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ. 7.25 ಮತ್ತು ಹಿರಿಯ ನಾಗರಿಕರಿಗೆ ಶೇ. 7.75 ಬಡ್ಡಿದರವನ್ನು ಒದಗಿಸುತ್ತಿದೆ.

DA Hike: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ತುಟ್ಟಿಭತ್ಯೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ

ಬ್ಯಾಂಕ್ ಆಫ್ ಪಂಜಾಬ್ ಮತ್ತು ಸಿಂಧ್

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 444 ದಿನಗಳ ಅವಧಿಯ ಸ್ಥಿರ ಠೇವಣಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ. 7.25 ಮತ್ತು ಹಿರಿಯ ನಾಗರಿಕರಿಗೆ ಶೇ. 7.75 ರವರೆಗೆ ಬಡ್ಡಿದರವನ್ನು ಒದಗಿಸುತ್ತಿದೆ.