Friday, 22nd November 2024

ಉಗ್ರರ ಭೀತಿ: ಡ್ರೋನ್‌, ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ 30 ದಿನ ನಿಷೇಧ

ನವದೆಹಲಿ: ಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಡ್ರೋನ್‌ಗಳು ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟ ವನ್ನು 30 ದಿನ ನಿಷೇಧಿಸಿದ್ದಾರೆ.

ಡ್ರೋನ್‌ಗಳು ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ನಿಷೇಧಾಜ್ಞೆ ಅನ್ವಯವಾಗ ಲಿದೆ. ನ.13ರಿಂದ ಡಿಸೆಂಬರ್‌ 12ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ಮುಂಬೈನಲ್ಲಿ ವಿವಿಐಪಿಗಳು ಸೇರಿ ಹಲವರನ್ನು ಗುರಿಯಾಗಿಸಿ ಡ್ರೋನ್‌, ಏರಿಯಲ್‌ ಮಿಸೈಲ್ಸ್‌ಗಳನ್ನು ಬಳಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಹಾಗಾಗಿ, ಬೃಹನ್‌ ಮುಂಬೈ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಯಾಗುವ ಭೀತಿ ಇರುವುದರಿಂದ ಡ್ರೋನ್‌ ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳ ಹಾರಾಟ ನಿಷೇಧಿಸಲಾಗಿದೆ.

‘ಡ್ರೋನ್‌ಗಳು, ರಿಮೋಟ್‌ ಕಂಟ್ರೋಲ್ಡ್‌ ಮೈಕ್ರೋ-ಲೈಟ್‌ ಏರ್‌ಕ್ರಾಫ್ಟಟ್‌, ಪ್ಯಾರಾ ಗ್ಲೈಡರ್‌ಗಳು, ಪ್ಯಾರಾ ಮೋಟರ್‌, ಹಾಟ್‌ ಏರ್‌ ಬಲೂನ್‌ಗಳು ಹಾಗೂ ಖಾಸಗಿ ಹೆಲಿಕಾಪ್ಟರ್‌ಗಳನ್ನು ಮುಂಬೈನಲ್ಲಿ ಹಾರಾಟ ನಡೆಸಬೇಕು ಎಂದರೆ ಲಿಖಿತ ಅನುಮತಿ ಪಡೆಯ ಬೇಕು. ಇಲ್ಲದಿದ್ದರೆ ಹಾರಾಟಕ್ಕೆ ಅವಕಾಶ ಇರುವುದಿಲ್ಲ’ ಎಂದು ತಿಳಿಸಲಾಗಿದೆ.