Sunday, 15th December 2024

ವಿಷಾಹಾರ ಸೇವನೆ: 18 ಮಂದಿ ಪ್ರವಾಸಿಗರು ಅಸ್ವಸ್ಥ

ವಯನಾಡ್‌: ಕೇರಳದಲ್ಲಿ ಶಂಕಿತ ವಿಷಾಹಾರ ಸೇವನೆ ಪ್ರಕರಣ ವರದಿಯಾಗಿದೆ.

ವಯನಾಡ್‌ನ ಕೆಲವು ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸಿದ 18 ಮಂದಿ ಪ್ರವಾಸಿಗರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದೆ. 23 ಮಂದಿ ಪ್ರವಾಸಿಗರು ತಿರುವನಂತಪುರದಿಂದ ವಯನಾಡ್‌ಗೆ ಬಂದಿದ್ದರು. ಸೋಮವಾರ ರಾತ್ರಿ ವಯನಾಡ್‌ನ ವಿವಿಧೆಡೆಗಳಲ್ಲಿರುವ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವಿಸಿದ್ದರು ಎಂದು ವರದಿಯಾಗಿದೆ.

ಯಾವ ರೆಸ್ಟೋರೆಂಟ್‌ನಲ್ಲಿ ಸೇವಿಸಿದ ಯಾವ ಆಹಾರದಿಂದ ಪ್ರವಾಸಿಗರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ತಿಳಿದುಬಂದಿಲ್ಲ.

ಕಲ್ಪೆಟ್ಟಾದಲ್ಲಿ ರಾತ್ರಿ ಆಹಾರ ಸೇವಿಸಿದ್ದ ಪ್ರವಾಸಿಗರು ಅಸ್ವಸ್ಥರಾಗಿದ್ದಾರೆ. ಪೊಲೀಸರು ಹಾಗೂ ಆರೋಗ್ಯಾಧಿ ಕಾರಿಗಳ ತಂಡ ಮೂರು ರೆಸ್ಟೋರೆಂಟ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದೆ ಎಂದು ಹೇಳಿದ್ದಾರೆ. ಸದ್ಯ 18 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಕಾಸರಗೋಡಿನಲ್ಲಿ ವಿಷಾಹಾರ ಸೇವನೆಯಿಂದ 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, 18 ಮಂದಿ ಅಸ್ವಸ್ಥರಾಗಿದ್ದರು.