Thursday, 12th December 2024

ಫೋರ್ಬ್ಸ್: 32ನೇ ಸ್ಥಾನದಲ್ಲಿ ನಿರ್ಮಲಾ ಸೀತಾರಾಮನ್

NIRMALA SITHARAMAN

ವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾ ಮನ್ 32ನೇ ಸ್ಥಾನ ಪಡೆದಿದ್ದಾರೆ.

ಎಚ್ಸಿಎಲ್ ಕಾರ್ಪೊರೇಷನ್ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ (60 ನೇ ಸ್ಥಾನ), ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷೆ ಸೋಮಾ ಮೊಂಡಲ್ (70 ನೇ ಸ್ಥಾನ) ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ (76 ನೇ ಸ್ಥಾನ) ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಮೂವರು ಭಾರತೀಯ ಮಹಿಳೆಯರು.

ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೆಯೆನ್ ಮೊದಲ ಸ್ಥಾನದಲ್ಲಿದ್ದರೆ, ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ ಕ್ರಿಸ್ಟಿನ್ ಲಗಾರ್ಡೆ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಯುಎಸ್ ಉಪಾಧ್ಯಕ್ಷ ಕಮಲ್ ಹ್ಯಾರಿಸ್ ಮೂರನೇ ಸ್ಥಾನದಲ್ಲಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಮೇ 2019 ರಲ್ಲಿ ಭಾರತದ ಮೊದಲ ಪೂರ್ಣಾವಧಿ ಹಣಕಾಸು ಸಚಿವ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥರಾಗಿದ್ದಾರೆ. ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಫೋರ್ಬ್ಸ್ ಪ್ರಕಾರ, ಮೊಂಡಲ್ ಅವರು ಸರ್ಕಾರಿ ಸ್ವಾಮ್ಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ (ಎಸ್‌ಎಐಎಲ್) ಮೊದಲ ಮಹಿಳಾ ಅಧ್ಯಕ್ಷರಾಗಿ ದ್ದಾರೆ.

ಮಜುಂದಾರ್ ಶಾ ಭಾರತದ ಅತ್ಯಂತ ಶ್ರೀಮಂತ ಸ್ವ-ನಿರ್ಮಿತ ಮಹಿಳೆಯರಲ್ಲಿ ಒಬ್ಬರು ಎಂದು ಫೋರ್ಬ್ಸ್ ಬಣ್ಣಿಸಿದೆ. ಅವರು 1978 ರಲ್ಲಿ ಬಯೋಫಾರ್ಮಾಸ್ಯುಟಿಕಲ್ ಸಂಸ್ಥೆ ಬಯೋಕಾನ್ ಅನ್ನು ಸ್ಥಾಪಿಸಿದರು.