ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ವಿದೇಶಿ ವ್ಯಾಪಾರ ನೀತಿಯನ್ನು ಮುಂದಿನ ವರ್ಷ ಮಾರ್ಚ್ 31 ರವರೆಗೆ ವಿಸ್ತರಿಸಲಾಗುವುದು ಎಂದು ಸೋಮವಾರ ಹೇಳಿದ್ದಾರೆ.
ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಸರ್ಕಾರ, ಈ ಮೊದಲು ಎಫ್‌ಟಿಪಿ 2015-20 ಅನ್ನು ಈ ವರ್ಷದ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿತ್ತು.
ವಿದೇಶಿ ವ್ಯಾಪಾರ ನೀತಿಯು ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ರಫ್ತುಗಳನ್ನು ಹೆಚ್ಚಿಸಲು ಮಾರ್ಗಸೂಚಿಗಳನ್ನು ಒದಗಿಸುತ್ತದೆ. ನಾವು ಪಾಲಿಸಿಯನ್ನು ಮಾರ್ಚ್ 31 (2022) ವರೆಗೆ ವಿಸ್ತರಿಸಲು ನಿರ್ಧರಿಸಿದ್ದೇವೆ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ನಾವು ಹೊಸ ನೀತಿಯೊಂದಿಗೆ ಆರಂಭಿಸ ಬಹುದು’ ಎಂದು ತಿಳಿಸಿದರು.
ಮಾರ್ಚ್ 31, 2020 ರಂದು, ಸರ್ಕಾರವು ಕರೋನಾ ವೈರಸ್ ಏಕಾಏಕಿ ಮತ್ತು ಲಾಕ್‌ಡೌನ್ ನಡುವೆ ವಿದೇಶಿ ವ್ಯಾಪಾರ ನೀತಿಯನ್ನು 2015-20 ಅನ್ನು ಒಂದು ವರ್ಷದವರೆಗೆ ಮಾರ್ಚ್ 31, 2021 ರವರೆಗೆ ವಿಸ್ತರಿಸಿತು. ಏಪ್ರಿಲ್-ಸೆಪ್ಟೆಂಬರ್ 21, 2021 ರ ಅವಧಿಯಲ್ಲಿ ರಫ್ತುಗಳು 185 ಡಾಲರ್ ಬಿಲಿಯನ್‌ಗಿಂತ ಹೆಚ್ಚಾಗಿದೆ ಎಂದರು.