Friday, 22nd November 2024

ಮತ ಚಲಾಯಿಸಿದ ಮಾಜಿ ಮುಖ್ಯಮಂತ್ರಿ ಮಾಯಾವತಿ

ಲಖನೌ: ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾ ವತಿಯವರು ಬುಧವಾರ ಲಖನೌದಲ್ಲಿ ಮತ ಚಲಾಯಿಸಿದರು.

ಮತದಾನ ಪ್ರಾರಂಭವಾದ ಕೆಲವೇ ಹೊತ್ತಲ್ಲಿ ಆಗಮಿಸಿ ಮತ ಹಾಕಿದ್ದಾರೆ. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಪಿಲಿಭಿತ್​, ಲಖಿಂಪುರ ಖೇರಿ, ಸೀತಾಪುರ, ಹಾರ್ಡೋಯಿ, ಉನ್ನಾವೋ, ಲಖನೌ, ರಾಯ್​ ಬರೇಲಿ, ಬಾಂದಾ ಮತ್ತು ಫತೇಹ್​ಪುರ ಜಿಲ್ಲೆಗಳ ಒಟ್ಟು 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

2017ರ ಚುನಾವಣೆಯಲ್ಲಿ ಈ 59 ವಿಧಾನಸಭಾ ಕ್ಷೇತ್ರಗಳಲ್ಲಿ 51ನ್ನು ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿ ಪಾಲಿಗೆ ಲಖಿಂಪುರ ಖೇರಿ ಸ್ವಲ್ಪ ಸವಾಲಿನ ಕ್ಷೇತ್ರವಾಗಲಿದೆ.