Thursday, 12th December 2024

ರಕ್ಷಾ ಬಂಧನ ಹಬ್ಬಕ್ಕೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಹರಿಯಾಣ ಸರ್ಕಾರ

ಹರಿಯಾಣ: ರಕ್ಷಾ ಬಂಧನ ಹಬ್ಬದ ಉಡುಗೊರೆಯಾಗಿ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ 24 ಗಂಟೆಗಳ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದ್ದಾರೆ.

ಉಚಿತ ಬಸ್ ಪ್ರಯಾಣವು ಆ.10 ರಂದು ಮಧ್ಯಾಹ್ನ 12 ರಿಂದ ಆ.11 ರ ಬೆಳಿಗ್ಗೆ 12 ರವರೆಗೆ ಇರುತ್ತದೆ.

ಈ ಬಗ್ಗೆ ಸಿಎಂ ಖಟ್ಟರ್ ಟ್ವೀಟ್ ಮಾಡಿ, ‘ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆ ನೀಡಿ, ಹರಿಯಾಣ ಸರ್ಕಾರವು ಈ ವರ್ಷವೂ ಹರಿಯಾಣ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಿದೆ. ಉಚಿತ ಪ್ರಯಾಣದ ಸೌಲಭ್ಯವು ಆಗಸ್ಟ್ 10, 2022 ರಂದು ಮಧ್ಯಾಹ್ನ 12 ಗಂಟೆಯಿಂದ, ಆಗಸ್ಟ್ 11, 2022 ರ ರಕ್ಷಾ ಬಂಧನದ ದಿನ ದಂದು ಮಧ್ಯರಾತ್ರಿ 12 ಗಂಟೆಯವರೆಗೆ ಇರುತ್ತದೆ.

ವಿಶೇಷವೆಂದರೆ, ಕಳೆದ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಲಾಗುತ್ತಿತ್ತು ಆದಾಗ್ಯೂ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ನಿಲ್ಲಿಸಲಾಯಿತು.

ಈ ವರ್ಷ2022 , ಒಡಹುಟ್ಟಿದವರ ನಡುವಿನ ಪ್ರೀತಿಯ ಬಂಧವನ್ನು ಗುರುತಿಸುವ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 11 ರಂದು ದೇಶಾದ್ಯಂತ ಆಚರಿಸಲಾಗುವುದು. ಆ ನಿಟ್ಟಿನಲ್ಲಿ ಹರಿಯಾಣ ಸರ್ಕಾರವು ಈ ವರ್ಷವೂ ಹರಿಯಾಣ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯಗಳನ್ನು ಒದಗಿಸಲಾಗಿದೆ.