ಪಣಜಿ: ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಮುಂಬರಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರು. ದೆಹಲಿಯ ಜನರು ಉಚಿತ ವಿದ್ಯುತ್ ಪಡೆಯಲು ಸಾಧ್ಯವಾದರೆ ಗೋವಾದ ಜನರಿಗೇಕೆ ನೀಡಬಾರದು ಎಂದು ಕೂಡ ಪ್ರಶ್ನಿಸಿದರು. 40 ಸದಸ್ಯ ಬದಲ ಗೋವಾ ವಿಧಾನಸಭೆಗೆ 2022ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. ಗೋವಾ ಬದಲಾವಣೆ ಬಯಸಿದೆ, ಜನರು ಸ್ವಚ್ಛ ರಾಜಕೀಯ ಬಯಸುತ್ತಿದ್ದಾರೆ ಎಂದರು.
ಪಕ್ಷ ಬದಲಿಸಿ ಈ ಶಾಸಕರು ಜನರ ಕೆಲಸವನ್ನು ಪೂರ್ಣಗೊಳಿಸಲು ತಾವು ಬಿಜೆಪಿಗೆ ಸೇರುತ್ತಿದ್ದೇವೆ ಎಂದು ಹೇಳಿದ್ದರು, ಆದರೆ, ಅವರು ಹೇಳಿಕೊಂಡಂತೆ ಜನರ ಕೆಲಸವನ್ನು ಮಾಡಿಲ್ಲ, ಹಣದ ಆಮಿಷದಿಂದ ಪಕ್ಷ ಬದಲಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.