ನವದೆಹಲಿ: ಗುರುಗ್ರಾಮ್ (Gurugram) ನಿವಾಸಿಯೊಬ್ಬರು ಉಬರ್ ಡ್ರೈವರ್‌ನಿಂದ(Uber Driver) ಬೆದರಿಕೆ ಸಂದೇಶವನ್ನು(Frightening Message) ಸ್ವೀಕರಿಸಿದ್ದು, ಅವರು ತೀರಾ ಆತಂಕಗೊಂಡು ರೈಡ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ ಸುರಕ್ಷತೆಗಾಗಿ ಮತ್ತೆ ಮನೆಗೆ ಓಡಿ ಹೋಗಿರುವ ಘಟನೆಯೊಂದು ವರದಿಯಾಗಿದೆ.
ಗುರುಗ್ರಾಮ್ ನಿವಾಸಿ ರೈಲ್ವೆ ಸ್ಟೇಷನ್ ತಲುಪಲು ಉಬರ್ ರೈಡ್ ಬುಕ್ ಮಾಡಿದ್ದು, ಬುಕ್ಕಿಂಗ್ ಸ್ವೀಕರಿಸಿದ ಡ್ರೈವರ್ ಕೆಲವೇ ಕ್ಷಣಗಳಲ್ಲಿ “I Want to Kidnap you”(ನಾನು ನಿಮ್ಮನ್ನು ಅಪಹರಿಸಲು ಬಯಸುತ್ತೇನೆ) ಎಂಬಂಥ ಮೆಸೇಜ್ ಕಳುಹಿಸಿದ್ದಾನೆ. ಇದರಿಂದ ಭಯಭೀತರಾದ ರೆಡ್ಡಿಟ್ ಬಳಕೆದಾರರಾದ ‘Kushpyro1’ ತಕ್ಷಣವೇ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದು, ರೈಲ್ವೆ ಸ್ಟೇಷನ್‌ಗೂ ತಲುಪದೆ ಆತಂಕದಿಂದ ಸುರಕ್ಷತೆಗಾಗಿ ಮನೆಗೆ ಓಡಿ ಹೋಗಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಈಗ ಭಾರೀ ವೈರಲ್ ಆಗುತ್ತಿದೆ.
ಘಟನೆಯ ಕುರಿತ ವಿವರಗಳನ್ನು ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿವರಿಸಿದ್ದು”ಇದನ್ನು ಬರೆಯುವಾಗಲೂ ನನಗೆ ಭಯವಾಗುತ್ತಿದೆ. ಇನ್ನು ಒಂದು ಗಂಟೆಯಲ್ಲಿ ನಾನು ರೈಲ್ವೆ ಸ್ಟೇಷನ್‌ಗೆ ತಲುಪಬೇಕು. ತಲುಪುತ್ತಿನೋ ಇಲ್ಲವೋ ಎಂಬುದು ದೇವರಿಗಷ್ಟೇ ಗೊತ್ತು” ಎಂದು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದರು.
Uber Driver Freighting Behaviour (14th December)
byu/kushpyro1 ingurgaon
ಆನಂದ್ ವಿಹಾರ್ ಟರ್ಮಿನಲ್‌ಗೆ ಹೋಗುವ ಸಲುವಾಗಿ ಸೆಡಾನ್ ಕ್ಯಾಬ್ ಅನ್ನು ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ಡ್ರೈವರ್‌ಗೆ ಸಂದೇಶ ಕಳುಹಿಸಿ ಮತ್ತೆ ತಮ್ಮ ಫೋನ್ ಅನ್ನು ಜೇಬಿಗಿರಿಸಿ ಹೊರಡಲು ಕಾಯುತ್ತಾ ನಿಂತಿದ್ದಾರೆ. ಮತ್ತೆ ಓಟಿಪಿ ಚೆಕ್ ಮಾಡಲು ನೋಡಿದ್ದು, ಅಷ್ಟರೊಳಗೆ ಡ್ರೈವರ್‌ನಿಂದ ವಿಚಿತ್ರ ಸಂದೇಶವೊಂದು ಬಂದಿದೆ. ಮೆಸೇಜ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡು ರೈಡ್ ಕ್ಯಾನ್ಸಲ್ ಮಾಡಿದ್ದಾರೆ.
ಚಂದನ್ ಎಂಬ ವ್ಯಕ್ತಿ ಮಾರುತಿ ಸುಜುಕಿ ಡಿಜೈರ್ ಅನ್ನು ಚಾಲನೆ ಮಾಡಲು ನಿಯೋಜಿಸಲಾದ ಚಾಲಕರಾಗಿದ್ದರು ಎಂದು ತಿಳಿದು ಬಂದಿದೆ. ಇನ್ನು ಈ ಬಗ್ಗೆ ರೆಡ್ಡಿಟ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “I Want to Drop You” ಎಂದು ಟೈಪ್ ಮಾಡಲು ಹೋಗಿ ಎರರ್‌ನಿಂದಾಗಿ “I Want to Kidnap You” ಎಂದಾಗಿರಬಹುದು ಎಂದಿದ್ದಾರೆ.
ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಇನ್ನಿಲ್ಲ
ಸಾಲು ಮರದ ತಿಮ್ಮಕ್ಕ ಅವರಂತೆಯೇ ಸಾವಿರಾರು ಮರಗಳನ್ನು ಬೆಳೆಸಿ ʼವೃಕ್ಷಮಾತೆʼ ಎಂದೇ ಖ್ಯಾತರಾಗಿರುವ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ (86) (Tulsi Gowda) ಅವರು ವಯೋ ಸಹಜ ಖಾಯಿಲೆಯಿಂದ ಸ್ವಗೃಹದಲ್ಲಿ ಸೋಮವಾರ(ಡಿ.16) ನಿಧನರಾದರು.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರು ನಿನ್ನೆ ಸಂಜೆ ನಿಧನರಾದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಇವರು ತಮ್ಮ ಜೀವಿತಾವಧಿಯಲ್ಲಿ ವರ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿ ವೃಕ್ಷಮಾತೆ ಎಂದು ಪ್ರಸಿದ್ಧರಾಗಿದ್ದರು.
ಕಳೆದ 14ಕ್ಕೂ ಹೆಚ್ಚು ವರ್ಷಗಳಿಂದ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಇವರು ತೊಡಗಿದ್ದರು. ಮನೆಯಲ್ಲಿ ತೀರಾ ಬಡತನವಿದ್ದೂ ಕುಟುಂಬಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಲೇ ಹಸಿರು ಕ್ರಾಂತಿ ಮಾಡಿದ್ದ ಪರಿಸರ ಪ್ರೇಮಿ ತುಳಸಿಗೌಡ ಅವರ ಪರಿಸರ ಪ್ರೇಮವನ್ನು ಪರಿಗಣಿಸಿ ಭಾರತ ಸರ್ಕಾದರದಿಂದ 2020ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರಿಗೆ ಸುಬ್ರಾಯ ಮತ್ತು ಸೋನಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಈ ಸುದ್ದಿಯನ್ನೂ ಓದಿ:Raju Adakalli Column: ಗಿಡ ಮರಗಳ ದೊಡ್ಡಮ್ಮ ಈ ತುಳಸಿ ಗೌಡಮ್ಮ