Monday, 16th September 2024

ಪೆಟ್ರೋಲ್, ಡೀಸೆಲ್ ದರ ಏರಿಕೆ ನಾನ್-ಸ್ಟಾಪ್‌

ನವದೆಹಲಿ: ಪಂಚರಾಜ್ಯ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಸೋಮವಾರ ಲೀಟರ್ ಗೆ 30 ಪೈಸೆ ಮತ್ತು ಡೀಸೆಲ್ ದರ 35 ಪೈಸೆ ಏರಿಕೆ ಕಂಡಿದೆ.

6 ದಿನದಲ್ಲಿ ಪೆಟ್ರೋಲ್ ರೂ.3.95, ಡೀಸೆಲ್ ರೂ.4.10 ಏರಿಕೆಯಾದಂತಾಗಿದೆ. 6 ಬಾರಿ ಏರಿಕೆ ಬಳಿಕ ದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ. 99.41 ರೂಪಾಯಿ, ಲೀಟರ್ ಡೀಸೆಲ್ ಬೆಲೆ 90.44 ರೂಪಾಯಿಗೆ ತಲುಪಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 31 ಪೈಸೆ ಹೆಚ್ಚಳ ಮಾಡಲಾಗಿದ್ದು, ಲೀಟರ್ ಡೀಸೆಲ್ ಬೆಲೆ 37 ಪೈಸೆ ಹೆಚ್ಚಳವಾಗಿದೆ. ಅದರ ಅನ್ವಯ ಮುಂಬೈ ಲೀಟರ್ ಪೆಟ್ರೋಲ್ 114.19 ರೂಪಾಯಿ ಹಾಗೂ ಡೀಸೆಲ್ 98.50 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ 32 ಪೈಸೆ ಏರಿಕೆ, ಲೀಟರ್ ಡೀಸೆಲ್ 35 ಪೈಸೆ ಏರಿಕೆ ಆಗಿದೆ. ಲೀಟರ್ ಪೆಟ್ರೋಲ್ ದರ 104.78 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.02 ರೂಪಾಯಿ ದಾಖಲಾಗಿದೆ.

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 105.18 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.33 ರೂಪಾಯಿ, ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 108.85 ಮತ್ತು 93.92 ರೂಪಾಯಿ ದಾಖಲಾಗಿದೆ.