Monday, 16th September 2024

ಪೆಟ್ರೋಲ್, ಡೀಸೆಲ್ ಬೆಲೆ: ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆ

#Petrol #Diesel

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಂದು ಕೂಡ ಏರಿಕೆಯಾಗಿದೆ. 15 ದಿನಗಳಲ್ಲಿ 13 ನೇ ಬಾರಿ ಹೆಚ್ಚಳವಾಗಿದ್ದು, ಲೀಟರ್ ಗೆ 9.20 ರೂ.ನಷ್ಟು ಏರಿಕೆ ಕಂಡಿದೆ.

ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ ಎರಡು ವಾರ ಗಳಲ್ಲಿ ಲೀಟರ್‌ ಗೆ 9.20 ರೂ. ಹೆಚ್ಚಳವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಈ ಹಿಂದೆ 103.81 ರೂ.ನಿಂದ 104.61 ರೂ., ಹಾಗೂ ಡೀಸೆಲ್ ದರ.95.07 ರೂ.ನಿಂದ 95.87 ರೂ. ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 84 ಪೈಸೆ ಮತ್ತು 85 ಪೈಸೆ ಏರಿಕೆಯಾಗಿದೆ. ದರ ಹೆಚ್ಚಳದೊಂದಿಗೆ, ಮುಂಬೈನಲ್ಲಿ ಪೆಟ್ರೋಲ್ ಬೆಲೆ ಈಗ 119.67 ರೂಪಾಯಿ ಆಗಿದ್ದರೆ, ಡೀಸೆಲ್ 103.92 ರೂಪಾಯಿಗೆ ಮಾರಾಟವಾಗಲಿದೆ.