Saturday, 14th December 2024

ಪೆಟ್ರೋಲ್, ಡೀಸೆಲ್: ಲೀಟರ್‌’ಗೆ 80 ಪೈಸೆ ಏರಿಕೆ

#Petrol #Diesel

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಮತ್ತೆ ಲೀಟರ್‍ಗೆ 80 ಪೈಸೆ ಏರಿಕೆ ಯಾಗಿದೆ.

ಕಳೆದ 10 ದಿನದಲ್ಲಿ ಒಟ್ಟು 8 ರೂ.ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 102.61 ರೂ.ಗೆ ಹೋಲಿಸಿದರೆ ಈಗ 103.41 ರೂ., ಡೀಸೆಲ್ ದರಗಳು ಲೀಟರ್ ರೂ.93.87 ರಿಂದ ರೂ.94.67 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ 108.14 ,ಚನೈ-108.21, ಭೂಪಾಲ್-115, ಔರಂಗಾಬದ್ -119,ಆಗ್ರಾ -102.23, ಅಹಮದಾಬಾದ್- 102.29,ಅಲಹಾಬಾದ್ 102.53,ಔರಂಗಾಬಾದ್-119.18,ಭುವನೇಶ್ವರ- 109.50,ಚಂಡೀಗಢ- 101.99, ಡೆಹ್ರಾ ಡೂನ್ -100.99, ಗುವಾಹಟಿ- 102.55,ಹೈದರಾಬಾದ್- 116.33,ಇಂದೋರ್ -115.12, ಜೈಪುರ- 114.95, ಜಮ್ಮು -103.61, ಜಮ್ಶೆಡ್ಪುರ -105.78,ಕಾನ್ಪುರ -102.15,ಕೊಲ್ಲಾಪುರ -117.60,ಕೋಲ್ಕತ್ತಾ- 112.19,ಕೋಝಿಕ್ಕೋಡ್ -112.31,ಲಕ್ನೋ- 102.45.

ಮುಂಬೈ- 117.57, ನಾಸಿಕ್- 117.90, ಪಾಟ್ನಾ -113.33, ರಾಯಪುರ- 108.57 ರೂಗೆ ಮಾರಾಟವಾಗುತ್ತಿದೆ.