ನವದೆಹಲಿ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೊದಲಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದುಬಾರಿಯಾಗುತ್ತಲೇ ಇದೆ.
ಈ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆ.4ರಂದು 37 ಪೈಸೆ, ಫೆ.5ರಂದು 37 ಪೈಸೆ, ಫೆ.9ರಂದು 42 ಪೈಸೆ, ಫೆ.10ರಂದು 31 ಪೈಸೆ, ಫೆ.11ರಂದು 38 ಪೈಸೆ ಹಾಗೂ ಫೆ.12ರಂದು 38 ಪೈಸೆ ಏರಿಕೆ ಮಾಡಲಾಗಿತ್ತು. ಈಗ ಫೆ.13ರಂದು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 39 ಪೈಸೆ ಹೆಚ್ಚಳ ಮಾಡಲಾಗಿದೆ.
5 ದಿನಗಳಿಂದ ಒಟ್ಟು 1.82 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.
2020ರ ಜೂನ್ ತಿಂಗಳಲ್ಲಿ ಉದಾಹರಣೆಗೆ 23 ದಿನ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡ ಲಾಗಿತ್ತು. ಈಗ ಜನವರಿಯಲ್ಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗುತ್ತದೆ. ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿವರ ಹೀಗಿದೆ.
ಬೆಂಗಳೂರು- ಪೆಟ್ರೋಲ್ 91.09 ರೂ., ಡೀಸೆಲ್ 83.09 ರೂ.
ಮುಂಬೈ- ಪೆಟ್ರೋಲ್ 94.36 ರೂ., ಡೀಸೆಲ್ 85.32 ರೂ.
ಚೆನ್ನೈ- ಪೆಟ್ರೋಲ್ 90.70 ರೂ., ಡೀಸೆಲ್ 83.86 ರೂ.
ಕೋಲ್ಕತ್ತಾ- ಪೆಟ್ರೋಲ್ 89.73 ರೂ., ಡೀಸೆಲ್ 82.33 ರೂ.
ದೆಹಲಿ- ಪೆಟ್ರೋಲ್ 88.44 ರೂ., ಡೀಸೆಲ್ 78.74 ರೂ.