ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗುರುವಾರ ಮತ್ತೆ ಹೆಚ್ಚಳವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಳನ್ನು ಕ್ರಮವಾಗಿ, 23 ಪೈಸೆ ಮತ್ತು 30 ಪೈಸೆಗಳಷ್ಟು ಹೆಚ್ಚಿಸಲಾಗಿದೆ.
ಮೇ 4 ರ ನಂತರ ಇದು 14 ನೇ ಬೆಲೆ ಹೆಚ್ಚಳವಾಗಿದೆ, ಮತ್ತು ಇತ್ತೀಚಿನ ಹೆಚ್ಚಳದೊಂದಿಗೆ, ಮುಂಬೈನಲ್ಲಿ ಪೆಟ್ರೋಲ್ ನ ದರವು ಪ್ರತಿ ಲೀಟರ್ ಗೆ 100 ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕ್ರಮವಾಗಿ, ಪ್ರತಿ ಲೀಟರ್’ಗೆ 99.94 ರೂ. ಕ್ಕೆ ಮತ್ತು 91.87 ರೂ.ಗೆ ಏರಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 96.86ರೂ. ಡೀಸೆಲ್ 89.75ರೂಗೆ ಏರಿಕೆಯಾಗಿದೆ.
ಕೋಲ್ಕತಾದಲ್ಲಿ ಪೆಟ್ರೋಲ್ 93.78ರೂ, ಡೀಸೆಲ್ 87.51 ರೂಗೆ ಏರಿಕೆಯಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ 99.98ರೂ., ಡೀಸೆಲ್ 91.93ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 95.33ರೂ ಮತ್ತು ಡೀಸೆಲ್ 89.44 ರೂ.ಗೆ ಏರಿಕೆ ಯಾಗಿದೆ.
ಮಂಗಳವಾರ ನಡೆದ 13ನೇ ಏರಿಕೆಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ₹3.04 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ₹3.59 ರಷ್ಟು ಹೆಚ್ಚಳವಾಗಿದೆ.