Sunday, 24th November 2024

ಮತ್ತೆ ತೈಲೋತ್ಪನ್ನಗಳ ದರ 25 ಪೈಸೆ ಹೆಚ್ಚಳ

#Petrol #Diesel

ಮುಂಬೈ: ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದೆ. ಶನಿವಾರ ಪೆಟ್ರೋಲಿ ಯಂ ಉತ್ಪನ್ನ ಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ದೇಶದಲ್ಲಿ ಶನಿವಾರ ಪೆಟ್ರೋಲ್ ದರದಲ್ಲಿ 25 ಪೈಸೆ ಮತ್ತು ಡೀಸೆಲ್ ದರದಲ್ಲಿ 30 ಪೈಸೆ ಹೆಚ್ಚಳ ವಾಗಿದೆ.

ಕಳೆದ ಸೆ.5ರಂದು ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆ ಇಳಿಕೆಯಾ ಗಿತ್ತು. ಇಂದು ಲೀಟರ್ ಪೆಟ್ರೋಲ್ ದರ 25 ರಿಂದ 30 ಪೈಸೆ ಹೆಚ್ಚಳವಾಗಿದ್ದರೆ, ಪ್ರತೀ ಲೀಟರ್ ಡೀಸೆಲ್ ದರ 28 ರಿಂದ 30 ಪೈಸೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 102.14 ರೂ. ಹಾಗೂ ಲೀಟರ್ ಡೀಸೆಲ್ ದರ 90.47 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ದರ 108.19 ರೂ. ಹಾಗೂ ಡೀಸೆಲ್ ದರ 98.16 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 102.74 ರೂ. ಹಾಗೂ ಡಿಸೆಲ್ ದರ 93.54 ರೂಪಾಯಿದೆ ಏರಿಕೆಯಾಗಿದೆ.

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 99.76 ರೂ ಹಾಗೂ ಡೀಸೆಲ್ ದರ 94.99 ರೂಪಾಯಿಗೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.65 ರೂಪಾಯಿ ಹಾಗೂ ಡೀಸೆಲ್ ದರ 95.98 ರೂಪಾಯಿಗೆ ಏರಿಕೆ ಆಗಿದೆ.