Sunday, 13th October 2024

ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆ

ನವದೆಹಲಿ : ದೇಶದಲ್ಲಿ ಕಳೆದ 5 ದಿನಗಳಲ್ಲಿ 4 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿದೆ.

ಈ ಮೂಲಕ ಕಳೆದ 4 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 3.6 . ರೂ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 98.61 ಮತ್ತು 89.87 ರೂ.ಏರಿಕೆಯಾದರೆ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103.86 ರೂ. ಮತ್ತು ಡೀಸೆಲ್ ಬೆಲೆ 88.18 ರೂ., ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 113.27 ರೂ ಮತ್ತು 85 ಪೈಸೆ ಹೆಚ್ಚಳದ ನಂತರ ಡೀಸೆಲ್ ಬೆಲೆ ಲೀಟರ್‌ಗೆ 97.10 ರೂ. ಹೆಚ್ಚಾಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 104.47 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 94.51 ರೂ. ಆಗಿದೆ.

ಮಂಗಳವಾರ, ಬುಧವಾರ, ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ತಲಾ 80 ಪೈಸೆ ಏರಿಕೆಯಾಗಿದೆ.