ನವದೆಹಲಿ: ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿಯೂ ಸ್ಥಿರವಾಗಿದೆ.
ಕಳೆದ ವಾರಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 16 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 14 ಪೈಸೆ ಕಡಿತಗೊಳಿಸಿದ್ದವು.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90 ರೂಪಾಯಿ 40 ಪೈಸೆ, ಡೀಸೆಲ್ ದರ 80 ರೂಪಾಯಿ 73 ಪೈಸೆ ಆಗಿದೆ. ಮುಂಬೈ ನಗರದಲ್ಲಿ ಪೆಟ್ರೋಲ್ ದರ 96 ರೂಪಾಯಿ 83 ಪೈಸೆ, ಪ್ರತಿ ಲೀಟರ್ ಡೀಸೆಲ್ ದರ 87 ರೂಪಾಯಿ 81 ಪೈಸೆಯಷ್ಟಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 92 ರೂಪಾಯಿ 43 ಪೈಸೆ, ಡೀಸೆಲ್ ದರ 85 ರೂಪಾಯಿ 75 ಪೈಸೆ ಇದೆ.
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಗಮನಿಸಿದಾಗ 90 ರೂಪಾಯಿ 20 ಆಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 83 ರೂಪಾಯಿ 61 ಪೈಸೆ ಇದೆ. ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಅನ್ನು 93 ರೂಪಾಯಿ 43 ಪೈಸೆ ಕೊಟ್ಟು ಗ್ರಾಹಕರು ಕೊಳ್ಳುತ್ತಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 85 ರೂಪಾಯಿ 60 ಪೈಸೆ ಇದೆ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 88 ರೂಪಾಯಿ 72 ಪೈಸೆ ಇದ್ದರೆ. ಪ್ರತಿ ಲೀಟರ್ ಡೀಸೆಲ್ ಬೆಲೆ 81 ರೂಪಾಯಿ 13 ಪೈಸೆ ಆಗಿದೆ.
ಏಪ್ರಿಲ್ ತಿಂಗಳ ಮೊದಲು 15 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ದರವನ್ನು ಬದಲಾವಣೆ ಮಾಡಿರಲಿಲ್ಲ. 15 ದಿನಗಳ ನಂತರ ಗುರುವಾರ ಮೊದಲ ಬಾರಿಗೆ ಕಡಿತ ಕಂಡಿತು.