Friday, 22nd November 2024

ಸ್ಥಿರತೆ ಕಾಪಾಡಿಕೊಂಡ ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಬುಧವಾರ ಯಾವುದೇ ಬದಲಾವಣೆ ಕಾಣಲಿಲ್ಲ.

ಶನಿವಾರದ ಬಳಿಕ ಇಂಧನ ದರ ಪರಿಷ್ಕರಣೆಗೊಂಡಿಲ್ಲ. ಪೆಟ್ರೋಲ್ ಒಟ್ಟು 4.87 ಪ್ರತಿ ಲೀಟರ್ ಹಾಗೂ ಡೀಸೆಲ್ 4.99 ಪ್ರತಿ ಲೀಟರ್ ನಷ್ಟು ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 62.87 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ನಷ್ಟಿದೆ. ಒಪೆಕ್ ರಾಷ್ಟ್ರಗಳು ತೈಲ ಪೂರೈಕೆಯಲ್ಲಿ ವ್ಯತ್ಯಯ ಮಾಡಿರುವುದರಿಂದ ಭಾರತದಂಥ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಕ್ಕೆ ಬಾರಿ ಹೊಡೆತ ಬಿದ್ದಿದೆ. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ.

ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಪ್ರತಿ ಲೀಟರ್‌ 81.47 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ನಗರ – ಪೆಟ್ರೋಲ್- ಡೀಸೆಲ್

ದೆಹಲಿ: 91.17 ರೂ- 81.47 ರೂ

ಮುಂಬೈ: 97.57 ರೂ – 88.60 ರೂ

ಚೆನ್ನೈ: 93.11 ರೂ- 86.45 ರೂ

ಬೆಂಗಳೂರು: 94.22 ರೂ – 86.35 ರೂ