Sunday, 8th September 2024

ಕಚ್ಚಾ ತೈಲದ ಮೇಲೆ ತೆರಿಗೆ ಕಡಿತ: ಇಂದಿನಿಂದ ಜಾರಿ

ನವದೆಹಲಿ: ಣದುಬ್ಬರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸ್ಥಳೀಯವಾಗಿ ಉತ್ಪಾದನೆ ಮಾಡಲಾಗುವ ಕಚ್ಚಾ ತೈಲದ ಮೇಲೆ ತೆರಿಗೆಯನ್ನು ಕಡಿತಗೊಳಿಸಿದೆ. ಕಚ್ಚಾತೈಲದ ವಿಂಡ್‌ಫಾಲ್ ತೆರಿಗೆಯನ್ನು ಪ್ರತಿ ಟನ್‌ಗೆ 5,050 ರೂಪಾಯಿಯಿಂದ 4,350ಕ್ಕೆ ಇಳಿಸಲಾಗಿದೆ.

ಇನ್ನು ಎಟಿಎಫ್‌ ಮೇಲಿನ ತೆರಿಗೆಯನ್ನು ಅನ್ನು ಕೂಡಾ ಪ್ರತಿ ಲೀಟರ್‌ಗೆ 1.5ಕ್ಕೆ ಇಳಿಸಿದೆ, ಪ್ರತಿ ಲೀಟರ್‌ ಎಟಿಎಫ್‌ಗೆ 6 ರೂಪಾಯಿ ತೆರಿಗೆ ಆಗಿತ್ತು. ಇನ್ನು ಕೇಂದ್ರ ಸರ್ಕಾರವು ಡಿಸೇಲ್ ರಫ್ತಿನ ಮೇಲೆ ವಿಂಡ್‌ಫಾಲ್ ತೆರಿಗೆಯು ಪ್ರತಿ ಲೀಟರ್‌ಗೆ 7.5 ರೂಪಾಯಿಯಿಂದ 2.50 ರೂಪಾಯಿಗೆ ಇಳಿಸಲಾಗಿದೆ.

ಫೆಬ್ರವರಿ 16ರಿಂದಲೇ ಈ ಪರಿಷ್ಕೃತ ಬಡ್ಡಿದರವು ಜಾರಿಗೆ ಬರುತ್ತದೆ. ಇನ್ನು ಮಾಹಿತಿ ಪ್ರಕಾರ ಪೆಟ್ರೋಲ್ ಸುಂಕವು ಶೂನ್ಯವಾಗಿಯೇ ಉಳಿಯಲಿದೆ.

ವಿಂಡ್‌ಫಾಲ್ ತೆರಿಗೆ ಸರ್ಕಾರದ ವಿಧಿಸುವ ಹೆಚ್ಚುವರಿ ತೆರಿಗೆಯಾಗಿದೆ. ನವೆಂಬರ್ 2022ರಲ್ಲಿ ಕೇಂದ್ರ ಸರ್ಕಾರವು ಕಚ್ಚಾ ತೈಲ ರಫ್ತಿನ ಮೇಲಿನ ವಿಂಡ್‌ ಫಾಲ್‌ ತೆರಿಗೆಯನ್ನು ಪ್ರತಿ ಟನ್‌ಗೆ 11,000 ರೂಪಾಯಿಯಿಂದ 9,500 ರೂಪಾಯಿಗೆ ಇಳಿಸಿದೆ. ಹಾಗೆಯೇ ಎಟಿಎಫ್‌ ಮೇಲಿನ ತೆರಿಗೆಯನ್ನು ಪೆಟ್ರೋಲ್‌ ಪ್ರತಿ ಲೀಟರ್‌ಗೆ 3.50 ರೂಪಾಯಿ ಯಿಂದ 5 ರೂಪಾಯಿಗೆ ಏರಿಸಿದೆ. ಡೀಸೆಲ್ ಪ್ರತಿ ಲೀಟರ್‌ಗೆ 12 ರೂಪಾಯಿಯಿಂದ 13 ರೂಪಾಯಿಗೆ ಏರಿಸಿದೆ.

“1.45 ಲಕ್ಷ ಕೋಟಿಯಿಂದ 1.5 ಲಕ್ಷ ಕೋಟಿವರೆಗೆ ನಾವು ಮಾಸಿಕ ಜಿಎಸ್‌ಟಿ ಅನ್ನು ಪಡೆಯಲು ಸಾಧ್ಯವಾಗುತ್ತದೆ,” ಎಂದು ತಿಳಿಸಿದ್ದಾರೆ.

error: Content is protected !!