Friday, 13th December 2024

ರಾಷ್ಟ್ರಪತಿ ಚುನಾವಣೆ: ಗೋಪಾಲಕೃಷ್ಣ ಗಾಂಧಿ ಹೆಸರು ಪ್ರಸ್ತಾಪ ?

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಮಹಾತ್ಮಾ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹೆಸರನ್ನ ಪ್ರತಿಪಕ್ಷಗಳು ಸೂಚಿಸಿವೆ ಎನ್ನಲಾಗಿದೆ.

ಶರದ್ ಪವಾರ್ ಭೇಟಿ ಮಾಡಿದ ಎಡಪಕ್ಷಗಳು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರ ಹೆಸರನ್ನ ಸೂಚಿಸಿವೆ ಎಂದು ಮೂಲ ಗಳು ತಿಳಿಸಿವೆ. 77 ವರ್ಷದ ಈ ಮಾಜಿ ಅಧಿಕಾರಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾದಲ್ಲಿ ಭಾರತದ ಹೈಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರು ಮಹಾತ್ಮಾ ಗಾಂಧಿ ಮತ್ತು ಸಿ.ರಾಜಗೋಪಾಲಾಚಾರಿ ಅವರ ಮೊಮ್ಮಗ ನಾಗಿದ್ದಾರೆ. ಈ ನಡುವೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಚರ್ಚಿಸಲು ವಿವಿಧ ವಿರೋಧ ಪಕ್ಷಗಳ ಸಭೆಯನ್ನ ಕರೆದಿದ್ದಾರೆ. ಕೆಲವು ನಾಯಕರು ಎನ್ಸಿಪಿ ಪೋಷಕ ಶರದ್ ಪವಾರ್ ಅವರ ಹೆಸರನ್ನ ಪ್ರಸ್ತಾಪಿಸಿದ್ದಾರೆ.