Thursday, 12th December 2024

ಜಿ20 ಅಧ್ಯಕ್ಷ ಸ್ಥಾನ ದೊಡ್ಡ ಜವಾಬ್ದಾರಿ: ಎಸ್.ಜೈಶಂಕರ್

ನವದೆಹಲಿ: ಭಾರತದ ಜಿ 20 ಅಧ್ಯಕ್ಷ ಸ್ಥಾನ ಬಹಳ ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳುವ ಮೂಲಕ ಟೀಕಾಕಾರರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಜಾಗತಿಕ ಪೂರೈಕೆ ಸರಪಳಿಗಳು ಮತ್ತು ಬಲವಾದ ರಾಜಕೀಯದ ಮೇಲೆ ಹೆಚ್ಚಿನ ಆರ್ಥಿಕ ಒತ್ತಡವಿರುವ ಸಮಯದಲ್ಲಿ ಪ್ರಬಲ ಗುಂಪಿನ ಸಭೆಗಳನ್ನು ಆಯೋಜಿಸುವ ಜವಾಬ್ದಾರಿ ಯನ್ನು ದೇಶವು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಭಾರತ ಡಿಸೆಂಬರ್ 1 ರಂದು ಔಪಚಾರಿಕವಾಗಿ ಜಿ 20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಮುಂದಿನ ಜಿ 20 ನಾಯಕರ ಶೃಂಗಸಭೆ ಯು ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿ ಯಲ್ಲಿ ನಡೆಯಲಿದೆ.

ಆಸ್ಟ್ರಿಯಾದ ರಾಜಧಾನಿಯಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಭಾರತವು ತನ್ನ ಅಧ್ಯಕ್ಷ ಸ್ಥಾನವನ್ನು ಅಂತಾರಾಷ್ಟ್ರೀಯ ಸಮುದಾಯದ ಪ್ರಯೋಜನಕ್ಕಾಗಿ ಬಳಸಲು ಉದ್ದೇಶಿಸಿದೆ ಎಂದು ಹೇಳಿದರು.

ಜಿ20 ಅಧ್ಯಕ್ಷ ಸ್ಥಾನವನ್ನು ಪಡೆಯುವುದು ದೊಡ್ಡ ವಿಷಯವಲ್ಲ ಎ೦ದು ನನಗೆ ಕೆಲ ಮೊಮ್ಮೆ ಪ್ರಶ್ನೆಗಳನ್ನು ಬರುತ್ತವೆ. ಆದರೆ ಭಾರತಕ್ಕೆ ಇದು ಬಹಳ ದೊಡ್ಡ ವ್ಯವಹಾರವಾಗಿದೆ. ನಮ್ಮ ರಾಜತಾಂತ್ರಿಕ ಇತಿಹಾಸ ದಲ್ಲಿ ನಾವು ಇಷ್ಟು ಶಕ್ತಿಶಾಲಿ ರಾಷ್ಟ್ರ ಗಳನ್ನು ಹೊಂದಿರಲಿಲ್ಲ ಎಂದು ಹೇಳಿದರು.

ಈ ಜಿ20 ಅಧ್ಯಕ್ಷ ಸ್ಥಾನವು ಸಾಮಾನ್ಯವಾಗಿ ಮಾಡುವಂತಹದ್ದಲ್ಲ. ಇದು ಕೇವಲ ರಾಜಧಾನಿಯಲ್ಲಿ ಅಥವಾ ಎರಡು ಅಥವಾ ಮೂರು ಮಹಾನಗರಗಳಲ್ಲಿ ಮಾಡುವ ಕೆಲಸವಲ್ಲ. ನಾವು ಇದನ್ನು ದೇಶದಾದ್ಯಂತ 55 ಕ್ಕೂ ಹೆಚ್ಚು ನಗರಗಳಿಗೆ ಕೊಂಡೊಯ್ಯ ಲಿದ್ದೇವೆ ಎಂದೇಳಿದ್ದಾರೆ.

Read E-Paper click here