Sunday, 15th December 2024

ಹದಗೆಟ್ಟ ಸಚಿವ ನಿತಿನ್ ಗಡ್ಕರಿ ಆರೋಗ್ಯ

ಸಿಲಿಗುರಿ; ಸಿಲಿಗುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಆರೋಗ್ಯ ಹಠಾತ್ ಹದಗೆಟ್ಟಿದೆ.

ಗಡ್ಕರಿ ಅವರು ಸಿಲಿಗುರಿಯ ರಸ್ತೆಯೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ವೇದಿಕೆಯ ಬಳಿಯ ಕೊಠಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ ಇದ್ದಕ್ಕಿ ದ್ದಂತೆ ಆರೋಗ್ಯ ಹದಗೆಟ್ಟಿದೆ ಎನ್ನಲಾಗಿದೆ. ಕೂಡಲೇ ನಿಯೋಟಿಯಾ ಆಸ್ಪತ್ರೆಯ ವೈದ್ಯ ಪಿ.ಬಿ.ಭುಟಿಯಾ ಅವರು ಸಚಿವರ ಅರೋಗ್ಯ ತಪಾಸಣೆ ನಡೆಸಿದರು.

ಬಳಿಕ ಬಿಜೆಪಿ ಸಂಸದ ರಾಜು ಬಿಸ್ತಾ ಅವರ ನಿವಾಸಕ್ಕೆ ಕರೆದೊಯ್ದು ಮೂವರು ವೈದ್ಯರ ತಂಡ ಗಡ್ಕರಿ ಅವರಿಗೆ ಚಿಕಿತ್ಸೆ ನೀಡುತ್ತಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿತಿನ್ ಗಡ್ಕರಿ ಅವರ ಆರೋಗ್ಯ ವಿಚಾರಿಸಿದ್ದು ಸಚಿವರ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಸಿಲಿಗುರಿ ಕಮಿಷನರ್ ಗೆ ಆದೇಶಿಸಿದ್ದಾರೆ.

2018ರ ಸೆಪ್ಟೆಂಬರ್‌ನಲ್ಲಿ ಅಹ್ಮದ್‌ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇದಲ್ಲದೆ, ಏಪ್ರಿಲ್ 2010 ರಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಗಡ್ಕರಿ ತಲೆ ಸುತ್ತಿ ಬಿದ್ದಿದ್ದರು.