Sunday, 15th December 2024

ಸುಪಾರಿ ಕಿಲ್ಲರ‍್ಸ್‌ಗಳಿಂದ ಸಾಮೂಹಿಕ ಅತ್ಯಾಚಾರ

ಜೈಪುರ: ಉದ್ಯಮಿ ಕೊಲೆಗೈಯ್ಯಲ್ಲೆಂದು ಐಶಾರಾಮಿ ಹೊಟೆಲ್ ನಲ್ಲಿ ತಂಗಿದ್ದ ಸುಪಾರಿ ಕಿಲ್ಲರ್ಸ್ ಹೊಟೆಲ್ ನ ಮಹಿಳಾ ಸಿಬ್ಬಂದಿಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ.

ರಾಜಸ್ಥಾನದ ನೀಮಾನಾದಲ್ಲಿ ಘಟನೆ ನಡೆದಿದ್ದು, ಐದು ಮಂದಿ ಇಬ್ಬರು ಹೋಟೆಲ್ ಮಹಿಳಾ ಸಿಬ್ಬಂದಿಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಐಶಾರಾಮಿ ಹೊಟೆಲ್ ವೊಂದಕ್ಕೆ ಆಗಮಿಸಿದ್ದ ಐವರು ದುಷ್ಕರ್ಮಿಗಳು ಕೊಠಡಿಯನ್ನು ಪಡೆದಿದ್ದಾರೆ. ಕೆಲವೇ ಕ್ಷಣಗಳಲ್ಲಿ ರಿಸಪ್ಷನ್ ಗೆ ಕರೆ ಮಾಡಿ ಸೆಕ್ಸ್ ವರ್ಕರ್ ಗಳನ್ನು ರೂಮ್‌ಗೆ ಕಳುಹಿಸುವಂತೆ ಹೇಳಿದ್ದು, ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದಾರೆ.

ಸಿಟ್ಟಿಗೆದ್ದ ಆರೋಪಿಗಳು ನೇರವಾಗಿ ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆ ಕಡೆಗೆ ಹೋಗಿದ್ದಾರೆ. ಒಳಗೆ ಹೋದ ಆರೋಪಿಗಳು ಮಹಿಳಾ ಸಿಬ್ಬಂದಿಗಳಿಗೆ ಪಿಸ್ತೂಲು ತೋರಿಸಿ, ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ. ಕೂಡಲೇ ಎಚ್ಚೆತ್ತ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಪೊಲೀಸರ ವಿಶೇಷ ತಂಡ ಸ್ಥಳಕ್ಕೆ ಬಂದು ಮಹಿಳಾ ಸಿಬ್ಬಂದಿಯನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೇರ್ ಮತ್ತು ಪ್ರಿನ್ಸ್ ತಿವಾರಿ ಎಂದು ಗುರುತಿಸಲಾಗಿದೆ.

ವಿಚಾರಣೆ ನಡೆಸಿದ ಪೊಲೀಸರಿಗೆ ದುಷ್ಕರ್ಮಿಗಳು ಸ್ಫೋಟಕ ಮಾಹಿತಿ ನೀಡಿದ್ದು, ತಾವು ಓರ್ವ ಉದ್ಯಮಿಯನ್ನು ಹತ್ಯೆ ಮಾಡುವ ಸಲುವಾಗಿ ಬಂದಿದ್ದಾಗಿ ತಿಳಿಸಿದ್ದಾರೆ.