Thursday, 12th December 2024

ದರೋಡೆಕೋರ ಸುರಿಂದರ್ ಪಾಲ್ ಸಿಂಗ್ ಆಸ್ಪತ್ರೆಯಿಂದ ಪರಾರಿ

Faridkot

ಫರೀದ್ಕೋಟ್: ದರೋಡೆಕೋರ ಸುರಿಂದರ್ ಪಾಲ್ ಸಿಂಗ್ ಅಲಿಯಾಸ್ ಬಿಲ್ಲಾ ಫರೀದ್‌ ಕೋಟ್‌ನ ಆಸ್ಪತ್ರೆಯಿಂದ ಪೊಲೀಸರಿಗೆ ಸುಳಿವು ನೀಡದೆ ಪರಾರಿಯಾಗಿದ್ದಾನೆ.

ಉದ್ಯಮಿಗಳಿಗೆ ಬೆದರಿಕೆ ಹಾಕಿ, ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀ ಸರು ಎನ್‌ಕೌಂಟರ್ ನಡೆಸಿ ಆರೋಪಿ ಯನ್ನು ಬಂಧಿಸಿದ್ದರು.

ಪೊಲೀಸ್​ ಎನ್‌ಕೌಂಟರ್​ನಿಂದ ಗಾಯಗೊಂಡಿದ್ದ ಬಂಧಿತ ಗ್ಯಾಂಗ್‌ಸ್ಟರ್ ಬಿಲ್ಲಾ, ಬಿಗಿ ಭದ್ರತೆಯ ನಡುವೆಯೂ ಫರೀದ್‌ ಕೋಟ್‌ನ ಜಿಜಿಎಸ್ ವೈದ್ಯಕೀಯ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಜುಲೈ 11 ರಂದು ಫರೀದ್‌ಕೋಟ್ ಪೊಲೀಸರು ಎನ್‌ ಕೌಂಟರ್‌ ನಡೆಸಿ ಬಾಂಬಿಹಾ ಗುಂಪಿನ ಇಬ್ಬರು ದರೋಡೆಕೋರರನ್ನು ಬಂಧಿಸಿದ್ದರು.

ಎನ್‌ ಕೌಂಟರ್‌ನಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಜಿಜಿಎಸ್ ವೈದ್ಯಕೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಆರೋಪಿ ಪರಾರಿಯಾಗಿದ್ದಾನೆ.

ಹೈ ಪ್ರೊಫೈಲ್ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೂಡ ಗುರು ಗೋವಿಂದ್ ಸಿಂಗ್ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರಣ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಆರೋಪಿ ಸುರೀಂದರ್ ಬಹಳ ಸುಲಭ ವಾಗಿ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಹಿನ್ನೆಲೆ ಇಂತಹ ಘಟನೆ ಮರುಕಳಿಸ ದಂತೆ ಹದ್ದಿನ ಕಣ್ಣಿಡಲಾಗಿದೆ.

ಉದ್ಯಮಿಗಳಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಎ ಸಿಬ್ಬಂದಿ ಶಂಕಿತರ ಅಡಗು ತಾಣಗಳ ಮೇಲೆ ಎನ್‌ಕೌಂಟರ್ ನಡೆಸಿ ಬಿಲ್ಲಾನನ್ನು ಬಂಧಿಸಿದ್ದರು. ಈ ವೇಳೆ ದರೋಡೆಕೋರರು ಸಹ ಪೊಲೀಸರ ಮೇಲೆ ಗುಂಡಿನ ಪ್ರತಿದಾಳಿ ನಡೆಸಿದ್ದರು.