ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಕರೋನಾ ವೈರಸ್ ರೂಪಾಂತರದ ಓಮಿಕ್ರಾನ್ ವಿರುದ್ಧ ಜಾಗರೂಕ ರಾಗಿರಿ ಎಂದು ಸೋಮವಾರ ಜನರನ್ನು ಒತ್ತಾಯಿಸಿದ್ದಾರೆ. ಇದು ಈಗ ಜಗತ್ತಿನಾದ್ಯಂತ ವಿನಾಶವನ್ನು ಉಂಟುಮಾಡುತ್ತಿದೆ.
ಸಾಂಕ್ರಾಮಿಕ ರೋಗದ ಸವಾಲಿನ ಸಮಯದಲ್ಲಿ ನಾವು 100 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಿದ್ದೇವೆ. ಈಗ ನಾವು 150 ಕೋಟಿ ಡೋಸ್‌ಗಳತ್ತ ಸಾಗುತ್ತಿದ್ದೇವೆ. ಹೊಸ ವೈರಸ್ ರೂಪಾಂತರದ ಕುರಿತು ನಾವೆಲ್ಲರೂ ಎಚ್ಚರದಿಂದಿರ ಬೇಕು.’ ಎಂದು ಪ್ರಧಾನಿ ಮೋದಿ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ಮೊದಲು ತಮ್ಮ ಭಾಷಣ ದಲ್ಲಿ ಹೇಳಿದರು.
ದೇಶದ ಜನರ ಉತ್ತಮ ಆರೋಗ್ಯವೇ ಸರ್ಕಾರದ ಆದ್ಯತೆಯಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಮಾರ್ಚ್ 2022 ರವರೆಗೆ ವಿಸ್ತರಿಸುವುದಾಗಿಯೂ ಘೋಷಿಸಿದರು.
ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಧಾನ್ಯಗಳನ್ನು ಒದಗಿಸಲು ನಾವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಯನ್ನು ನಡೆಸುತ್ತಿದ್ದೇವೆ. ಇದರಿಂದ ಅವರು ಹೆಚ್ಚಿನ ಆಹಾರ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಯೋಜನೆಯನ್ನು ಈಗ ಮಾರ್ಚ್ 2022 ರವರೆಗೆ ವಿಸ್ತರಿಸಲಾಗಿದೆ.
ಗರಿಷ್ಠ 81.35 ಕೋಟಿ ಫಲಾನುಭವಿಗಳಿಗೆ ಸರ್ಕಾರವು ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುತ್ತದೆ.