Friday, 13th December 2024

ಗ್ಯಾಸ್ ಸಿಲಿಂಡರ್ ಸ್ಫೋಟ: ಐದು ಮನೆ ಕುಸಿತ

ಮುಂಬೈ: ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐದು ಮನೆಗಳು ಕುಸಿದಿದ್ದು, 11 ಜನರನ್ನು ರಕ್ಷಿಸಲಾಗಿದೆ.

ಕೆಲವು ಜನರು ಗಾಯಗೊಂಡಿದ್ದಾರೆ. ಎಷ್ಟು ಜನ ಎಂದು ಅವರ ನಿಖರವಾದ ಸಂಖ್ಯೆಯನ್ನು ನಿರ್ದಿಷ್ಟಪಡಿಸಲಿಲ್ಲ. ಚೆಂಬೂರ್ ಪ್ರದೇಶದ ಗಾಲ್ಫ್ ಕ್ಲಬ್ ಬಳಿಯ ಓಲ್ಡ್ ಬ್ಯಾರಕ್ ನಲ್ಲಿ ಘಟನೆ ನಡೆದಿದೆ.

ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ನಾಲ್ಕರಿಂದ ಐದು ಎರಡು ಅಂತಸ್ತಿನ ಕಟ್ಟಡಗಳು ಕುಸಿದು ಬಿದ್ದಿವೆ.

ಕುಸಿದ ಮನೆಗಳಿಂದ ಹನ್ನೊಂದು ಜನರನ್ನು ರಕ್ಷಿಸಲಾಗಿದೆ, ಇದುವರೆಗೆ ನಾಲ್ವರನ್ನು ಗೋವಂಡಿಯಲ್ಲಿರುವ ನಾಗರಿಕ-ಶತಾಬ್ದಿ ಆಸ್ಪತ್ರೆಗೆ ದಾಖಲಿಸ ಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಗ್ನಿಶಾಮಕ ದಳ, ಪೊಲೀಸ್, ನಾಗರಿಕ ಸಿಬ್ಬಂದಿ, ಆಂಬ್ಯುಲೆನ್ಸ್ ಸೇವೆ ಮತ್ತು ಇತರ ಏಜೆನ್ಸಿಗಳನ್ನು ಸಜ್ಜುಗೊಳಿಸಲಾಯಿತು.