ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅನೇಕರು ಗ್ಯಾಸ್, ಆ್ಯಸಿಡಿಟಿ ಸಮಸ್ಯೆಗೆ ಒಳಗಾಗುತ್ತಾರೆ. ಗ್ಯಾಸ್ಟ್ರಿಕ್ (Gastric Problem) ಸಮಸ್ಯೆಯು ಕೆಲವೊಮ್ಮೆ ಗಂಭೀರವಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳವುದು ಒಳ್ಳೆಯದು. ಈ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಆಯುರ್ವೇದ ತಜ್ಞರು ತಿಳಿಸಿದ ಈ ಮೂರು ಸಲಹೆಗಳನ್ನು ಪಾಲಿಸಿ ನೋಡಿ.
ಆಹಾರವನ್ನು ಸರಿಯಾಗಿ ಜಗಿದು ತಿನ್ನಿರಿ
ಆಯುರ್ವೇದವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಲು ಹಲವಾರು ಸಲಹೆಗಳನ್ನು ನೀಡಿದೆ. ಅದರಲ್ಲೂ ಗ್ಯಾಸ್ಟ್ರಿಕ್ ಸಮಸ್ಯೆ ಪರಿಹರಿಸಲು ನಾವು ಆಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು ಎಂಬುದಾಗಿ ತಿಳಿಸಿದೆ. ಸಾಮಾನ್ಯವಾಗಿ ನಾವು ಆಹಾರವನ್ನು ಬಾಯಿಗೆ ಹಾಕಿ ಒಂದೆರಡು ಸಲ ಜಗಿದು ನುಂಗಿ ಬಿಡುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಆಹಾರವನ್ನು 32 ಸಲ ಜಗಿಯಬೇಕಂತೆ. ಯಾಕೆಂದರೆ ಆಹಾರವನ್ನು 32 ಸಲ ಚೆನ್ನಾಗಿ ಜಗಿದು ತಿಂದರೆ ಆಗ ದೇಹಕ್ಕೆ ಆಹಾರದಲ್ಲಿರುವ ಸಂಪೂರ್ಣ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭವಾಗುತ್ತದೆ ಮತ್ತು ಇದರಿಂದ ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗುತ್ತವೆ ಎಂದು ತಿಳಿಸಿದೆ.
ನಮ್ಮ ಮನಸ್ಸು ಸಕಾರಾತ್ಮಕವಾಗಿದ್ದರೆ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ ದೈಹಿಕ ಆರೋಗ್ಯಕ್ಕೂ ಒಳ್ಳೆಯದಂತೆ. ಆದರೆ ಆಗಾಗ ಎದುರಾಗುವ ಕೆಲವೊಂದು ಸಮಸ್ಯೆಗಳು ನಾವು ಚಿಂತಿಸುವಂತೆ ಮಾಡುತ್ತವೆ. ಈ ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳಿಂದ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆಯಂತೆ. ಯಾಕೆಂದರೆ ಇವು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆಯ ಸಮಸ್ಯೆಗಳು ಕಾಡುತ್ತವೆ ಎನ್ನಲಾಗಿದೆ.
ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅನೇಕ ಜನರು ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಮಸಾಲೆಯುಕ್ತ ಆಹಾರ, ಬೇಳೆ ಕಾಳುಗಳು ಮತ್ತು ಕರಿದ ಆಹಾರವನ್ನು ಸೇವಿಸುವುದರಿಂದ ಜನರು ಪದೇಪದೇ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಅನುಭವಿಸುತ್ತಾರೆ. ಇದರಿಂದಾಗಿ ಜನರು ರಾತ್ರಿ ಮಲಗುವಾಗ ಅಥವಾ ಯಾವುದೇ ಕೆಲಸ ಮಾಡುವಾಗ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ:ಗರ್ಭಪಾತಕ್ಕೆ ಏನು ಕಾರಣ? ಇದನ್ನು ತಡೆಯುವುದು ಹೇಗೆ?
ಹಾಗಾಗಿ ಉತ್ತಮವಾದ ಜೀವನಶೈಲಿಗಳನ್ನು ರೂಢಿಸಿಕೊಳ್ಳಿ. ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳಿಂದ ದೂರವಿರಿ ಹಾಗೂ ಆರೋಗ್ಯಕರವಾದ ಜೀವನವನ್ನು ಸಾಗಿಸಿರಿ.