Friday, 22nd November 2024

ಸಸ್ಯಹಾರ ಊಟದಲ್ಲಿ ಮಾಂಸದ ತುಂಡು ಪತ್ತೆ: ಸಿಬ್ಬಂದಿ ಅಮಾನತು

ನವದೆಹಲಿ: ಗತಿಮಾನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕ ಆರ್ಡರ್‌ ಮಾಡಿದ್ದ ಸಸ್ಯಹಾರ ಊಟದಲ್ಲಿ ಮಾಂಸದ ತುಂಡು ಪತ್ತೆಯಾಗಿದ್ದು, IRCTC ತನ್ನ ಓರ್ವ ಉದ್ಯೋಗಿಯನ್ನು ಅಮಾನತುಗೊಳಿಸಿದೆ.

ರೈಲು ಸಂಖ್ಯೆ 124049 ರಲ್ಲಿ ವೀರಾಂಗನಾ ಲಕ್ಷ್ಮೀಬಾಯಿ ರೈಲು ನಿಲ್ದಾಣದಿಂದ (ಝಾನ್ಸಿ) ದೆಹಲಿಯ ಹಜರತ್ ನಿಜಾಮು ದ್ದೀನ್‌ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದಾರೆ. ಆದರೆ, ಅವರಿಗೆ ಐಆರ್‌ಸಿಟಿಸಿ ಸಿಬ್ಬಂದಿ ಮಾಂಸಾಹಾರಿ ಆಹಾರ ನೀಡಿದ್ದರು.

“ನಾವು ಒಬ್ಬ IRCTC ಉದ್ಯೋಗಿಯನ್ನು ಸಹ ಅಮಾನತುಗೊಳಿಸಿದ್ದೇವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಗಮನವು ಮೂಲ ಅಡುಗೆಮನೆಯಲ್ಲಿದೆ” ಎಂದು ಟ್ವೀಟ್ ಮಾಡಿದೆ.

ಪ್ರಯಾಣಿಕರಾದ ರಾಜೇಶ್ ಕುಮಾರ್ ತಿವಾರಿ ಮತ್ತು ಅವರ ಪತ್ನಿ ಪ್ರೀತಿ ತಿವಾರಿ ಅವರು ಸಸ್ಯಾಹಾರಿ ಊಟಕ್ಕೆ ಆರ್ಡರ್ ಮಾಡಿದ್ದರು. “ಆಹಾರದಲ್ಲಿ ಮಾಂಸದ ತುಂಡು ಪತ್ತೆ ಯಾಗಿತ್ತು. ಈ ಬಗ್ಗೆ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.