Sunday, 24th November 2024

ಗುಲಾಂ ಇಂದು ಹೊಸ ರಾಜಕೀಯ ಪಕ್ಷ ಘೋಷಣೆ ಸಾಧ್ಯತೆ

ಶ್ರೀನಗರ: ಕಾಂಗ್ರೆಸ್ ತೊರೆದ ಒಂದು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಸೋಮವಾರ ತಮ್ಮ ಹೊಸ ರಾಜಕೀಯ ಪಕ್ಷ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೊಸ ರಾಜಕೀಯ ಪಕ್ಷದ ಬಗ್ಗೆ ಕೇಳಿದ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸಿದ ಅವರು, ‘ನಾನು ನಾಳೆ ಪತ್ರಿಕಾಗೋಷ್ಠಿ ನಡೆಸುತ್ತೇನೆ. ಇಂದು ನಾನು ನನ್ನ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಸಭೆ ನಡೆಸುತ್ತೇನೆ’ ಎಂದು ಹೇಳಿದ್ದರು.

ಆಜಾದ್ ಅವರು ಕಾಂಗ್ರೆಸ್ ತೊರೆದ ನಂತರ ಜಮ್ಮುವಿನಲ್ಲಿ ನಡೆದ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ, ಸಂಪೂರ್ಣ ರಾಜ್ಯತ್ವದ ಮರುಸ್ಥಾಪನೆಯ ಮೇಲೆ ಕೇಂದ್ರೀ ಕರಿಸುವ ತಮ್ಮದೇ ಆದ ರಾಜಕೀಯ ಸಂಘಟನೆ ಪ್ರಾರಂಭಿಸುವುದಾಗಿ ಘೋಷಿಸಿ ದ್ದರು.

ಪಕ್ಷಕ್ಕೆ ನಾನು ಇನ್ನೂ ಹೆಸರನ್ನು ನಿರ್ಧರಿಸಿಲ್ಲ. ಜೆ-ಕೆ ಪಕ್ಷದ ಜನರು ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸುತ್ತಾರೆ ಎಂದು ರ್ಯಾಲಿಯಲ್ಲಿ ಹೇಳಿದ್ದರು.