Sunday, 15th December 2024

ಉಮೇದುವಾರಿಕೆ ಹಿಂಪಡೆದ ಗುಲಾಂ ನಬಿ ಆಜಾದ್

#GhulamNabiAzad

ವದೆಹಲಿ: ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಾರ್ಟಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಮುಂಬರುವ ಲೋಕಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಿಂದ ಗುಲಾಂ ನಬಿ ಆಜಾದ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ ಎಂದು ಪಕ್ಷ ತಿಳಿಸಿದೆ.

ಆಜಾದ್ ಅವರು ಹಿಂದೆ ಸರಿದ ಬಳಿಕ ಇದೀಗ ಮೊಹಮ್ಮದ್ ಸಲೀಂ ಪರ್ರೆ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಬಹುದು. ಈ ಸಂಬಂಧ ಕಾಶ್ಮೀರದ ಡಿಪಿಎಪಿಯ ಪ್ರಾಂತೀಯ ಅಧ್ಯಕ್ಷ ಮೊಹಮ್ಮದ್ ಅಮೀನ್ ಭಟ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬೆಳವಣಿಗೆಯನ್ನು ಆಜಾದ್ ಖಚಿತಪಡಿಸಿದ್ದಾರೆ.

ಹೀಗಾಗಿ ಅನಂತನಾಗ್-ರಜೌರಿ ಕ್ಷೇತ್ರಕ್ಕೆ ವಕೀಲ ಸಲೀಂ ಪರ್ರೆ ಡಿಪಿಎಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದರು.

ಆಜಾದ್ ಅವರು 2022ರಲ್ಲಿ ಕಾಂಗ್ರೆಸ್ ತೊರೆದಿದ್ದರು. ಈ ಮೂಲಕ ಪಕ್ಷದೊಂದಿಗಿನ ಐದು ದಶಕಗಳ ಸಂಬಂಧವನ್ನು ಕೊನೆಗೊಳಿಸಿ ಡಿಪಿಎಪಿಯನ್ನು ಸೇರಿಕೊಂಡರು.