Saturday, 14th December 2024

Glowing Skin: ತ್ವಚೆ ಪಳಪಳ ಹೊಳೆಯಲು ಆಲೂಗಡ್ಡೆಯ ಈ ಪ್ಯಾಕ್‌ ತಯಾರಿಸಿ ಹಚ್ಚಿಕೊಳ್ಳಿ

Glowing Skin

ತ್ವಚೆಯ ವಿಷಯಕ್ಕೆ ಬಂದಾಗ ಎಲ್ಲಾ ಹುಡುಗಿಯರೂ ತುಂಬಾನೇ ಎಚ್ಚರಿಕೆ ವಹಿಸುತ್ತಾರೆ. ಕ್ಲೀನ್ ಆದ ಹೊಳೆಯುವ ತ್ವಚೆ ತಮ್ಮದಾಗಬೇಕೆಂದು ಬಯಸುವುದು ಹೆಣ್ಣುಮಕ್ಕಳ ಸಹಜ ಬಯಕೆ. ಆದರೆ ಡೆಡ್ ಸ್ಕಿನ್, ಸನ್ ಟ್ಯಾನ್‍, ಪಿಗ್ಮೆಂಟೇಷನ್‍ನಿಂದಾಗಿ ತ್ವಚೆಯ ಅಂದ ಮಂದವಾಗುತ್ತದೆ. ಇದು ನಿಮ್ಮ ಸೌಂದರ್ಯವನ್ನು ಹಾಳುಮಾಡುತ್ತದೆ. ಹಾಗಾಗಿ ನಿಮ್ಮ ತ್ವಚೆ ಹೊಳೆಯುವ(Glowing Skin) ಕಾಂತಿಯನ್ನು ಪಡೆಯಲು ಆಲೂಗಡ್ಡೆಯಿಂದ ತಯಾರಿಸಿದ ಈ ಪ್ಯಾಕ್ ಬಳಸಿ ನೋಡಿ.

ಆಲೂಗಡ್ಡೆಯ ಪ್ಯಾಕ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಒಂದು ನಿಂಬೆ ಹಣ್ಣಿನ ರಸ, 1 ಆಲೂಗಡ್ಡೆಯ ರಸ, ಅರಿಶಿನ ಸ್ವಲ್ಪ, 1 ಚಮಚ ಕಡಲೆ ಹಿಟ್ಟು, 1 ಚಮಚ ಕೊಬ್ಬರಿ ಎಣ್ಣೆ.

ತಯಾರಿಸುವ ವಿಧಾನ: 

ಒಂದು ಬೌಲ್‍ನಲ್ಲಿ ನಿಂಬೆ ಹಣ್ಣಿನ ರಸ, ಆಲೂಗಡ್ಡೆ ರಸ, ಅರಿಶಿನವನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ನಂತರ ಇದಕ್ಕೆ ಕಡಲೆ ಹಿಟ್ಟು ಮತ್ತು ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ದಪ್ಪನೆಯ ಪ್ಯಾಕ್ ತಯಾರಿಸಿ. ಇದನ್ನು ನಿಮ್ಮ ಮುಖ ಹಾಗೂ ದೇಹದಲ್ಲಿ ಸನ್‍ಟ್ಯಾನ್, ಪಿಗ್ಮೆಂಟೇಷನ್, ಡೆಡ್ ಸ್ಕಿನ್ ಇರುವ ಸ್ಥಳದಲ್ಲಿ ಹಚ್ಚಿ, ಒಣಗಿದ ಬಳಿಕ ನೀರು ಹಾಕದೆ ಚೆನ್ನಾಗಿ ಉಜ್ಜಿ. ನಂತರ ತೊಳೆಯಿರಿ. ಇದನ್ನು ವಾರಕೊಮ್ಮೆಯಾದರೂ ಮಾಡಿ. ಇದರಿಂದ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ ಹಾಗೂ  ಪಿಂಗ್ಮೆಂಟೇಷನ್ ಕಲೆ ಮಸುಕಾಗುತ್ತದೆ.  ಸನ್ ಟ್ಯಾನ್‍ ನಿವಾರಿಸುತ್ತದೆ. ಇದು ನೈಸರ್ಗಿಕವಾಗಿ ನಿಮ್ಮ ತ್ವಚೆಯನ್ನ ಬ್ಲೀಚ್ ಮಾಡುತ್ತದೆ. ಇದರಿಂದಾಗಿ ಕ್ಲೀನ್ ಆ್ಯಂಡ್ ಕ್ಲಿಯರ್ ತ್ವಚೆ ನಿಮ್ಮದಾಗುತ್ತದೆ.

ತ್ವಚೆಗೆ ನಿಂಬೆ:

ನಿಂಬೆಯು ಹೆಚ್ಚಿನ ಆಮ್ಲೀಯ ಅಂಶವನ್ನು ಹೊಂದಿದೆ. ಇದು ನಿಮ್ಮ ಚರ್ಮದ ಟೋನ್ ಅನ್ನು ಬಿಳಿಯಾಗಿಸಲು ಮತ್ತು  ಕಪ್ಪು ಕಲೆಗಳು ಹಾಗೂ ಮೊಡವೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ವಿವಿಧ ಚರ್ಮದ ಸಮಸ್ಯೆಗಳಿಗೆ ಇದನ್ನು ಬಳಸಬಹುದು.

ತ್ವಚೆಗೆ ಆಲೂಗಡ್ಡೆ:

ಆಲೂಗಡ್ಡೆಯನ್ನು ಚರ್ಮಕ್ಕೆ ಬಳಸುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ನಿಮ್ಮ ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ ಮತ್ತು ಪೋಷಿಸುತ್ತದೆ. ಇದರಿಂದ  ಮೊಡವೆ, ನೆರಿಗೆಗಳು, ಕಪ್ಪು ವರ್ತುಲಗಳಂತಹ ಸಮಸ್ಯೆಗಳು ದೂರವಾಗುತ್ತವೆ.

ತ್ವಚೆಗೆ ಅರಿಶಿನ:

ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಅವು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಮೊಡವೆಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗೂ ಕಲೆಗಳನ್ನು ನಿವಾರಿಸಿ ಕಲೆರಹಿತವಾದ ತ್ವಚೆಯನ್ನು ನೀಡುತ್ತದೆ.

ತ್ವಚೆಗೆ ಕಡಲೆ ಹಿಟ್ಟು:

ಕಡಲೆ ಹಿಟ್ಟು ತ್ವಚೆಗೆ ಸನ್‍ಟ್ಯಾನ್, ಡೆಡ್ ಸ್ಕಿನ್‍ಗಳನ್ನು ನಿವಾರಿಸಿ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ತ್ವಚೆಯ ಆರೈಕೆಯಲ್ಲಿ ಬಳಸಬಹುದು.

ಇದನ್ನೂ ಓದಿ: ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಬದನೆಕಾಯಿ ಸೇವಿಸಬೇಡಿ

ತ್ವಚೆಗೆ ಕೊಬ್ಬರಿ ಎಣ್ಣೆ:

ಕೊಬ್ಬರಿ ಎಣ್ಣೆ ನಮ್ಮ ತ್ವಚೆಯನ್ನು ಸೂರ್ಯನ ಕಿರಣಗಳಿಂದಾಗುವ ಹಾನಿಯಿಂದ  ರಕ್ಷಿಸುತ್ತದೆ. ಚರ್ಮದ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಚರ್ಮದಲ್ಲಿರುವ ಡೆಡ್ ಸ್ಕಿನ್ ಅನ್ನು ನಿವಾರಿಸಿ ಚರ್ಮ ಹೊಳೆಯುವಂತೆ ಮಾಡುತ್ತದೆ.